Spread the love

ಮರಾವತಿ: ಚಿನ್ನಲೇಪನದ ವೇಳೆ ತಿರುಪತಿ ತಿರುಮಲ ದೇವಸ್ಥಾನದ ಗರ್ಭಗುಡಿಯನ್ನು 6-8 ತಿಂಗಳು ಮುಚ್ಚುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದ್ರೆ ಈ ಬಗ್ಗೆ ದೇಗುಲದ ಮುಖ್ಯ ಅರ್ಚಕರಲ್ಲಿ ಒಬ್ಬರಾದ ವೇಣುಗೋಪಾಲ ದೀಕ್ಷಿತುಲು ಅವರು ಸ್ಪಷ್ಟನೆ ನೀಡಿದ್ದಾರೆ.

ಗರ್ಭಗುಡಿ ಗೋಪುರಕ್ಕೆ ಚಿನ್ನದ ಲೇಪನ ಕಾರ್ಯ ನಡೆದರೂ ತಿಮ್ಮಪ್ಪನ ಮೂಲ ವಿರಾಟ ಮೂರ್ತಿಯ ದರ್ಶನ ಎಂದಿನಂತೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮಾರ್ಚ್ 1 ರಿಂದ ಚಿನ್ನದ ಲೇಪನ ಕಾರ್ಯ ಆರಂಭವಾಗಲಿದೆ. ಚಿನ್ನ ಲೇಪನಕ್ಕೆ 6 ತಿಂಗಳು ಸಮಯ ಬೇಕಾಗಲಿದೆ. ಇದಕ್ಕೂ 1 ವಾರ ಮುನ್ನ ದೇಗುಲದ ಪಕ್ಕದಲ್ಲೇ (ತಾತ್ಕಾಲಿಕ ಮಂದಿರ) ನಿರ್ಮಿಸಿ ಅಲ್ಲಿ ವೆಂಕಟೇಶ್ವರನ ಪ್ರತಿಕೃತಿ ಇರಿಸಲಾಗುತ್ತದೆ. ಈ 6 ತಿಂಗಳೂ ಮೂಲ ಮೂರ್ತಿಯ ದರ್ಶನ ಭಕ್ತರಿಗೆ ಲಭ್ಯವಿರುತ್ತದೆ. ಆದರೆ ಸುಪ್ರಭಾತದಿಂದ ಏಕಾಂತ ಸೇವೆವರೆಗಿನ ಸೇವೆಗಳನ್ನು ಏಕನಾಥಂನಲ್ಲಿ ಮಾಡಲಾಗುತ್ತದೆ ಎಂದಿದ್ದಾರೆ.ಕಲ್ಯಾಣೋತ್ಸವದಂಥ ಅರಿಜಿತ ಸೇವೆಯನ್ನು ಉತ್ಸವಮೂರ್ತಿಗಳಿಗೆ ಮಾಡಲಾಗುತ್ತದೆ. ಗರ್ಭಗುಡಿ ಮುಚ್ಚುತ್ತದೆ. ಆದ್ದರಿಂದ ಗರ್ಭಗೂಡಿ ಲೇಪನ ಕಾರ್ಯ ನಡೆಯುತ್ತಿದ್ದರೂ ವಿರಾಟ ಮೂರ್ತಿಯ ದರ್ಶನ ಭಕ್ತರಿಗೆ ಸಿಗಲಿದೆ ಎಂದು ಹೇಳಿದ್ದಾರೆ.


Spread the love

By admin