Spread the love

ಬರಿಮಲೆ ತೀರ್ಥಯಾತ್ರೆಗೆ ಹೊಂದಿಕೊಂಡು ಶಬರಿಮಲೆ ಪರಿಸರ ಪ್ರದೇಶವನ್ನೂ ಪ್ಲಾಸ್ಟಿಕ್ ಮುಕ್ತವಾಗಿಸಬೇಕು ಎಂಬ ಗುರಿಯೊಂದಿಗೆ ‘ಮಿಷನ್ ಗ್ರೀನ್ ಶಬರಿಮಲೆ’ ಎಂಬ ಯೋಜನೆ ರೂಪುಗೊಂಡಿದೆ.

ಪಟ್ಟಣಂ ತಿಟ್ಟ ಜಿಲ್ಲಾಡಳಿತದ ನೇತೃತ್ವದಲ್ಲಿ ಜಾರಿಗೆ ತರುವ ಮಿಷನ್ ಗ್ರೀನ್ ಶಬರಿಮಲೆಗಾಗಿ ಬಗೆಬಗೆಯ ಪ್ರಚಾರ ಅಭಿಯಾನಗಳನ್ನು ಶುಚಿತ್ವ ಮಿಷನ್ ಕೈಗೊಳ್ಳುತ್ತದೆ.

ಶಬರಿಮಲೆಯನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವುದಕ್ಕೆ ಶುಚಿತ್ವ ಮಿಷನ್ ನೇತೃತ್ವದಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

ದೇವಸ್ವಂ ಮಂಡಳಿ, ಅರಣ್ಯ ಇಲಾಖೆ, ಕುಟುಂಬ ಶ್ರೀ ಮಿಷನ್, ಪೊಲೀಸ್, ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆ ಎಂಬ ವಿಭಾಗಗಳ ಸಹಕಾರದೊಂದಿಗೆ ಮಿಷನ್ ಗ್ರೀನ್ ಶಬರಿಮಲೆ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ಶಬರಿಮಲೆಯನ್ನೂ ಪರಿಸರ ಪ್ರದೇಶಗಳನ್ನೂ ಪ್ಲಾಸ್ಟಿಕ್ ಮುಕ್ತಗೊಳಿಸುವುದಕ್ಕಾಗಿ ನಡೆಸುವ ಪ್ರಚಾರದ ಅಂಗವಾಗಿ, ತೀರ್ಥ ಯಾತ್ರಿಕರಿಗೆ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಪ್ಲಾಸ್ಟಿಕ್ ತ್ಯಾಜ್ಯಗಳ ಕುರಿತು ಅರಿವು ಮೂಡಿಸುವ ಸಂದೇಶಗಳನ್ನು ಹೊಂದಿರುವ 50 ಸಾವಿರದಷ್ಟು ಬಟ್ಟೆಯ ಚೀಲಗಳನ್ನು ವಿತರಿಸಲಾಗುತ್ತದೆ.

ನಿಲಯ್ಕಲ್ ಬಸ್ ಕ್ಯಾಂಪಿನಲ್ಲೂ ಚೆಂಗನ್ನೂರು ರೈಲ್ವೇ ಸ್ಟೇಶನ್ನಲ್ಲೂ ಸ್ಟಾಲ್ಗಳ ಮೂಲಕ ಯಾತ್ರಿಕರಿಗೆ ಬಟ್ಟೆಯ ಚೀಲಗಳನ್ನು ವಿತರಿಸುತ್ತಾರೆ. ಪಂಪಾನದಿಯ ನೀರಿನಲ್ಲಿ ಯಾತ್ರಿಕರು ತಮ್ಮ ಬಟ್ಟೆಗಳನ್ನು ಹರಿಯಬಿಡುವುದನ್ನು ತಡೆಯುವುದಕ್ಕಾಗಿ ಪಂಪಾ ನದಿಯ ಸ್ನಾನಘಟ್ಟಗಳಲ್ಲಿ ಗ್ರೀನ್ ಗಾರ್ಡ್ಸ್ ಕಾರ್ಯಕರ್ತರು ದಿನದ 24 ಗಂಟೆಗಳೂ ಶಿಫ್ಟ್ ವ್ಯವಸ್ಥೆಯಲ್ಲಿ ಕಾರ್ಯನಿರತರಾಗಿರುತ್ತಾರೆ.


Spread the love

By admin