Spread the love

ಸ್ಯಾಂಡಲ್‌ವುಡ್ ಸಿಂಡ್ರೆಲಾ ನಟಿ ರಾಧಿಕಾ ಪಂಡಿತ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೆ ಬಣ್ಣದ ಲೋಕಕ್ಕೆ ಕಮ್‌ಬ್ಯಾಕ್ ಆಗಲು ತೆರೆಮರೆಯಲ್ಲಿ ರಾಧಿಕಾ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕಿಯಾಗಿ ಪಡ್ಡೆಹುಡುಗರ ನಿದ್ದೆಗೆಡಿಸಿದ ಹುಡುಗಿ ರಾಧಿಕಾ ಪಂಡಿತ್, ಕೊನೆಯದಾಗಿ ʻಆದಿಲಕ್ಷ್ಮಿ ಪುರಾಣʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಪತಿ ಯಶ್, ಸಂಸಾರ ಮಕ್ಕಳು ಅಂತಾ ಫುಲ್ ಟೈಮ್ ಬ್ಯುಸಿಯಾಗಿ ಬಿಟ್ಟರು. ಈಗ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡ್ತಿದ್ದಾರೆ.

ಮದುವೆಯಾಗಿ ಇಬ್ಬರ ಮಕ್ಕಳ ತಾಯಿಯಾಗಿದ್ದರೂ ರಾಧಿಕಾ ಗ್ಲ್ಯಾಮರ್‌ ಕೊಂಚವೂ ಕಮ್ಮಿಯಾಗಿಲ್ಲ. ರಾಧಿಕಾ ಎಂಟ್ರಿಗೆ ಸಮಸ್ತ ಕರ್ನಾಟಕವೇ ಕಾದು ಕೂತಿದೆ. ಹೀಗಿರುವಾಗ ಅಭಿಮಾನಿಗಳ ಆಸೆಯಂತೆ ಪವರ್‌ಫುಲ್ ಕಥೆಯ ಮೂಲಕ ರಾಧಿಕಾ ಕಮ್‌ಬ್ಯಾಕ್ ಆಗಲು ತಯಾರಿ ನಡೆಸುತ್ತಿದ್ದಾರೆ.

ಅದ್ದೂರಿ ಎಂಟ್ರಿಗೆ ರಾಧಿಕಾ, ಹೊಸ ಕಥೆ ಬಗೆಯ ಕಥೆಯನ್ನ ಕೇಳ್ತಿದ್ದಾರೆ. ಸ್ತ್ರಿ ಪ್ರಧಾನ ಪಾತ್ರಗಳ ಮೂಲಕ ಕಮ್‌ಬ್ಯಾಕ್ ಆದ್ರೂ ಆಶ್ವರ್ಯವಿಲ್ಲ ಅಂತಿದ್ದಾರೆ ಗಾಂಧಿನಗರದ ಪಂಡಿತರು.


Spread the love

By admin