ಬೆಂಗಳೂರು: ವಿಮೆ ಹೊಂದಿರುವ ವಾಹನ ಅಪಘಾತಕ್ಕೀಡಾದಲ್ಲಿ ನೋಂದಣಿಯಾಗದಿದ್ದರೂ ಘಟನೆಯಿಂದ ತೊಂದರೆಗೊಳಗಾದ ಮೂರನೇ ವ್ಯಕ್ತಿಗೆ ಪರಿಹಾರ ನೀಡಬೇಕಾಗುತ್ತದೆ ಎಂದು ಬೆಂಗಳೂರಿನ ಹೈಕೋರ್ಟ್ ಪೀಠ ಆದೇಶಿಸಿದೆ. ಅಲ್ಲದೆ, ವಿಮಾ ಕಂಪೆನಿಯವರು ಮೂರನೇ ವ್ಯಕ್ತಿಗೆ ಪರಿಹಾರ ನೀಡಲು ಜವಾಬ್ದಾರನಾಗಿರುತ್ತಾರೆ.
ವಿಮಾ ಕಂಪೆನಿ ಆ ಮೊತ್ತವನ್ನು ವಿಮಾದಾರರಿಂದ ಮರು ಪಡೆದುಕೊಳ್ಳಲು ಅವಕಾಶವಿದೆ ಎಂದು ಪೀಠ ತಿಳಿಸಿದೆ.
ಬಸವರಾಜ ಬೀರಪ್ಪ ಕಂಬಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್ಪಿ ಸಂದೇಶ್ ಅವರಿದ್ದ ನ್ಯಾಯಪೀಠ ಆದೇಶ ನೀಡಿದೆ. ಅಪಘಾತ ನಡೆದ ದಿನದಂದು ಘಟನೆಗೆ ಕಾರಣವಾದ ವಾಹನ ನೋಂದಣಿಯಾಗಿಲ್ಲ. ತಾತ್ಕಾಲಿಕ ನೋಂದಣಿಯಾಗಿ ಅದರ ಅವಧಿ ಮೀರಿದೆ. ಹೀಗಿರುವಾಗ ಘಟನೆಯಿಂದ ತೊಂದರೆಗೊಳಗಾದವರು ಮೂರನೇ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಮೂರನೇ ವ್ಯಕಿಗೆ ಪರಿಹಾರವನ್ನು ವಿಮಾ ಕಂಪೆನಿಯೇ ಪಾವತಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.