Spread the love

ಬೆಂಗಳೂರು: ವರ್ಷದ ಮೊದಲ ರಾಷ್ಟ್ರೀಯ ಹಬ್ಬ ಜ. 26ರ ಗಣರಾಜ್ಯೋತ್ಸವಕ್ಕೆ ಪ್ರತೀ ವರ್ಷ ಬೆಂಗಳೂರಿನ ಲಾಲ್​ಬಾಗ್​ ಗಾಜಿನ ಮನೆ ಫಲಪುಷ್ಪಗಳಿಂದ ವಿಭಿನ್ನವಾಗಿ ಅಲಂಕಾರಗೊಳ್ಳುತ್ತದೆ. ಪ್ರತೀ ವರ್ಷದಂತೆ ಈ ವರ್ಷವೂ ಲಾಲ್​ಬಾಗ್​ ಗಣರಾಜ್ಯೋತ್ಸವ ದಿನದ ಅಂಗವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲು ಮುಂದಾಗಿದೆ.

ಈ ಬಾರಿ ರಾಜಧಾನಿ ಬೆಂಗಳೂರು ನಗರದ ಹುಟ್ಟು, ಬೆಳೆದ ಬಂದ ಹಾದಿಯ ಕುರಿತಂತೆ ನಗರದ ಇತಿಹಾಸವನ್ನು ಬಿಂಬಿಸುವ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲು ತೋಟಗಾರಿಕಾ ಇಲಾಖೆ ಮುಂದಾಗಿದೆ.

ಜ. 19 ರಿಂದ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಸರ್ಕಾರದ ಹಿರಿಯ ಅಧಿಕಾರಿಗಳ ಹಂತದಲ್ಲಿ ಚರ್ಚೆ ನಡೆಸಲಾಗಿದೆ. ಬೆಂಗಳೂರು ಇತಿಹಾಸ ಬಿಂಬಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರಕ್ಕೆ ಸುಮಾರು 1500 ವರ್ಷಗಳ ಇತಿಹಾಸವಿದೆ. ಈ ಇತಿಹಾಸ ಈಗಿನ ಯುವ ಜನತೆಗೆ ಅರ್ಥೈಸಬೇಕಾಗಿದೆ. ಇದಕ್ಕಾಗಿ ಇದೇ ವಿಷಯವನ್ನು ಪ್ರಸಕ್ತ ವರ್ಷದ ವಿಷಯವಸ್ತುವನ್ನಾಗಿ ನಿರ್ಧರಿಸಲಾಗಿದೆ ಅಧಿಕಾರಿಗಳು ವಿವರಿಸಿದರು.


Spread the love

By admin