Spread the love

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಕಳೆದ ವಾರದಲ್ಲಿ ಪಿಹೆಚ್ ಸಿಗೆ ಬರ್ತಿರುವವರ ಸಂಖ್ಯೆ ಹೆಚ್ಚಾಗಿದ್ದಾರೆ. ನಿತ್ಯ ಎರಡು ವಾಯಲ್ ಬೂಸ್ಟರ್ ಡೋಸ್ ಲಸಿಕೆ ಖಾಲಿಯಾಗುತ್ತಿದೆ.

ಪ್ರತಿ ಬಿಬಿಎಂಪಿ ಪಿ ಹೆಚ್ ಸಿ ಕೇಂದ್ರದಲ್ಲಿ ನಿತ್ಯ 40ಕ್ಕೂ ಹೆಚ್ಚು ಲಸಿಕೆ ಹಾಕಿಸಿಕೊ ಳ್ಳುವವರು ಹೆಚ್ಚಾಗಿದ್ದಾರೆ.

ದಾಸಪ್ಪ ಆಸ್ಪತ್ರೆ ಡಾಕ್ಟರ್ ಸುರೇಖಾ ಈ ಬಗ್ಗೆ ಪ್ರತಿಕ್ರೀಯಿಸಿ, ವಾರದಿಂದ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ನಾವೂ ಕೋ ವ್ಯಾಕ್ಸಿನ್ ಬೂಸ್ಟರ್ ಡೋಸ್ ನೀಡುತ್ತಿದ್ದೆವೆ. ಮುಂದಿನ ಒಂದು ತಿಂಗಳವರೆಗೆ ಲಸಿಕೆ ನೀಡಬಹುದು. ಹೆಚ್ಚುವರಿ ಲಸಿಕೆ ಅವಶ್ಯಕತೆ ಇದೆ. ಆ ಬಗ್ಗೆ ಮೇಲಧಿಕಾರಿ ಗಳ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದ್ದಾರೆ.


Spread the love

By admin