Spread the love

ಚಿತ್ರದುರ್ಗ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇಂದು ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ತುಮಕೂರಿನಿಂದ ಮದ್ಯಾಹ್ನ 3 ಕ್ಕೆ ಆಗಮಿಸಲಿರುವ ಅವರು ಮೊದಲಿಗೆ ನಗರದ ಅಂಬೇಡ್ಕರ್, ಮದಕರಿನಾಯಕ ಹಾಗು ಓಬವ್ವ ಪ್ರತಿಮೆಗಳಿಗೆ ಹಾರ ಹಾಕುವ ಮೂಲಕ ಗೌರವ ಸಲ್ಲಿಸಿದ್ದಾರೆ.

ನಂತರ ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆಯಲಿರುವ ಓಬಿಸಿ,

ಎಸ್ಸಿ ಎಸ್ಟಿ ಕಾರ್ಯ ಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮಠಕ್ಕೆ ಭೇಟಿ ನೀಡಿ ಚರ್ಚಿಸಲಿದ್ದಾರೆ. ಮುಂದೆ ಸಿರಿಗರೆ ಮಠಕ್ಕೆ ಭೇಟಿ‌ನೀಡಿ ಶ್ರೀಗಳ ಆಶೀರ್ವಾದ ಪಡೆದು ಸಿದ್ದೇಶ್ವರ ಸ್ವಾಮೀಜಿ ಮಠಕ್ಕೂ ಬೇಟಿದ ನಂತರ ದಾವಣಗೆರೆ ಕಡೆಗೆ ಪ್ರಯಾಣ ಬೆಳಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ ಹೇಳಿದ್ದಾರೆ.


Spread the love

By admin