Spread the love

ಬೂದಿಯಲ್ಲಿ ಮುಚ್ಚಿದ ಕೆಂಡದಂತಿದ್ದ ಕೋರೋನಾ ಇದೀಗ ತನ್ನ ಆರ್ಭಟ ಮತ್ತೆ ಶುರುಮಾಡಿದೆ. ಹೆಮ್ಮಾರಿ ಬಂದು ಜನರ ಜೀವನವೇ ಅಸ್ತವ್ಯಸ್ತವಾಗಿದೆ. ಲಾಕಡೌನ್ , ಕ್ವಾರೆಂಟೈನ್ , ಮಾಸ್ಕ್ , ಎಲ್ಲದರಿಂದ ಬೇಸತ್ತು ಹೋಗಿದ್ರು . ಕೆಲ ಸಮಯ ಮಹಾಮಾರಿಯ ಕಾಟ ಇದೆಲ್ಲದರಿಂದ ಚೇತರಿಸಕೊಂಡಿದ್ದ ಜನರಿಗೆ ಮತ್ತೆ ಕೋವಿಡ್ ನ ಹೊಸ ತಳಿಯ ಭೂತ ಕಾಡಲು ಶುರುಮಾಡಿದೆ.ಚೀನಾ ಮತ್ತು ಅಮೆರಿಗಳನ್ನು ಇನ್ನಿಲ್ಲದಂತೆ ಕಾಡಿದ್ದ ಓಮಿಕ್ರಾನ್‍ನ ಹೊಸ ರೂಪಾಂತರಿ ವೈರಸ್ XBB.1.5 ತಳಿ ಭಾರತಕ್ಕೂ ವಕ್ಕರಿಸಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

 

ದೇಶ, ವಿದೇಶ ಹಾಗೆ ರಾಜ್ಯದಲ್ಲಿ ಕೊರೊನಾ ಬಿಎಫ್‌ 7 ಭೀತಿ ಹೆಚ್ಚಳವಾಗುತ್ತಿರುವ ಆತಂಕದ ನಡುವೆಯೂ ರಾಜ್ಯಕ್ಕೆ ಮತ್ತೊಂದು ಒಮಿಕ್ರಾನ್‌ ರೂಪಾಂತರಿ ತಳಿ ಕಾಲಿಟ್ಟಿದ್ದು, ರಾಜ್ಯದಲ್ಲಿ ಮೊದಲ ಒಮಿಕ್ರಾನ್‌ ರೂಪಾಂತರಿ XXB.1.5 ಕೇಸ್‌ ಪತ್ತೆಯಾಗಿದೆ. ರಾಜ್ಯದಲ್ಲಿ XBB.1.5. ವೈರಸ್ ಪತ್ತೆಯಾಗಿದ್ದು, ಜನರಲ್ಲಿ ಹೆಚ್ಚಿನ ಆತಂಕ ಮನೆ ಮಾಡಿದೆ. ಅಮೆರಿಕಾದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗಲು ಕಾರಣವಾಗಿದ್ದು ಇದೇ ವೈರಸ್. ಹೀಗಾಗಿ ಈ ವೈರಸ್ ಕರ್ನಾಟಕದಲ್ಲೂ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.

ಸದ್ಯ ಭಾರತದ ಇತರ ರಾಜ್ಯಗಳನ್ನು ಗಮನಿಸುವುದಾದರೆ ರಾಜಸ್ಥಾನದಲ್ಲಿ 1 ಕೇಸ್, ಗುಜರಾತ್​ನಲ್ಲಿ 3 ಕೇಸ್ ಹಾಗೂ ಕರ್ನಾಟಕದಲ್ಲಿ XBB.1.5. ವೈರಸ್​ನ ಒಂದು ಕೇಸ್ ಪತ್ತೆಯಾಗಿದೆ.ಈ ಹಿಂದೆ ಗುಜರಾತ್‌ನಲ್ಲಿ ಮೊದಲ ಕೇಸ್‌ ಪತ್ತೆಯಾಗಿತ್ತು. ದೇಶ, ವಿದೇಶಗಳಲ್ಲೊ ಕೊರೊನಾ ರೂಪಾಂತರಿ ತಳಿ ತಾಂಡವವಾಡುತ್ತಿರುವ ಬೆನ್ನಲ್ಲೇ ಇನ್ನೊಂದು ಉಪರೂಪಾಂತರಿ ತಳಿ ಕಾಲಿಟ್ಟಿದೆ. ಗುಜರಾತ್‌ನಲ್ಲಿ ಮೂರು ಕೇಸ್, ರಾಜಸ್ಥಾನದಲ್ಲಿ ಒಂದು ಕೇಸ್‌, ಹಾಗೇ ಕರ್ನಾಟಕದಲ್ಲಿ ಒಂದು ಕೇಸ್‌ ಇರುವುದು ದೃಢಪಟ್ಟಿದೆ.


Spread the love

By admin