Spread the love

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರಿಗೆ ಹೊರಟಿದ್ದ ಬೆಂಗಳೂರು ಮೂಲದ ಪ್ರವಾಸಿಗರೊಬ್ಬರು ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರು ಜಿಲ್ಲೆ ಆಡಗೋಡಿ ಆನೆಪಾಳ್ಯದ ನಿವಾಸಿ ಮುನಿರಾಜು ಮೃತಪಟ್ಟವರಾಗಿದ್ದು, ಇವರು ಕುಟುಂಬದೊಂದಿಗೆ ಕಾರಿನಲ್ಲಿ ಹೊರನಾಡು, ಶೃಂಗೇರಿ ಕ್ಷೇತ್ರ ದರ್ಶನ ಮುಗಿಸಿಕೊಂಡು ಬಳಿಕ ಸಿಗಂದೂರಿಗೆ ತೆರಳಲು ಹೊಸನಗರದ ಲಾಡ್ಜ್ ಒಂದರಲ್ಲಿ ತಂಗಿದ್ದರು.ಗುರುವಾರ ಬೆಳಗ್ಗೆ ಅವರಿಗೆ ಹೃದಯಘಾತವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.


Spread the love

By admin