Spread the love

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಒಂದು ಗುಡ್​ ನ್ಯೂಸ್​ ಕೇಳಿಬಂದಿದೆ. ಯಶ್ 19ನೇ ಸಿನಿಮಾದ ಬಗ್ಗೆ ಈಗ ಸುದ್ದಿಯೊಂದು ಹೊರಕ್ಕೆ ಬಂದಿದೆ. ಕೆವಿಎನ್ ಪ್ರೊಡಕ್ಷನ್ ಹೌಸ್ ಯಶ್ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡಲಿದ್ದು, ನರ್ತನ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.

 

ಯಶ್​ ಅವರ ಜನ್ಮದಿನವಾದ ಜನವರಿ 8 ಅಥವಾ ಜನವರಿ 15 ರ ಸಂಕ್ರಾಂತಿಯಂದು ಕೆವಿಎನ್ ಪ್ರೊಡಕ್ಷನ್ ಹೌಸ್ ತಮ್ಮ ಹೊಸ ಚಿತ್ರದ ಘೋಷಣೆ ಮಾಡಬಹುದು ಎಂದು ಹೇಳಲಾಗಿದೆ.

ಶಿವರಾಜ್​ ಕುಮಾರ್ ಹಾಗೂ ಶ್ರೀಮುರಳಿ ನಟನೆಯ ‘ಮಫ್ತಿ’ ಯಶಸ್ವಿ ಸಿನಿಮಾ ನೀಡಿರುವ ನರ್ತನ್ ಅವರು ಯಶ್ 19ನೇ ಚಿತ್ರಕ್ಕೆ ಡೈರೆಕ್ಷನ್ ಮಾಡುತ್ತಾರಾ ಅಥವಾ ಬೇರೆ ಚಿತ್ರವನ್ನು ಅವರು ಘೋಷಣೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಯಶ್ ಅವರು, ತಮ್ಮ ಮುಂದಿನ ಚಿತ್ರವನ್ನು ಹಾಲಿವುಡ್ ಸಿನಿಮಾಗಳ ರೇಂಜ್‌ನಲ್ಲಿ ತೆರೆಗೆ ತರುವ ಮನಸ್ಸು ಮಾಡಿರುವುದಾಗಿ ಹೇಳಿದ್ದರು. ಇದಕ್ಕಾಗಿ ಸಾಕಷ್ಟು ಜನರನ್ನು ಭೇಟಿ ಮಾಡಬೇಕಿದೆ ಎಂದಿದ್ದರು.


Spread the love

By admin