Spread the love

ಪೀಣ್ಯದಾಸರಹಳ್ಳಿ: ದೇಶ ಹಾಗೂ ರಾಜ್ಯದಲ್ಲಿನ ಬಿಜೆಪಿ ಜನಪರ ಕಾರ್ಯಗಳನ್ನು ಮೆಚ್ಚಿ ನೂರಾರು ಜೆಡಿಎಸ್ ಕಾರ್ಯಕರ್ತರು ಮಾಜಿ ಶಾಸಕ ಎಸ್ ಮುನಿರಾಜು ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆ ವಾರ್ಡ್ ನ ಸಿದ್ದೇಶ್ವರ ಬಡಾವಣೆ ಹಾಗೂ ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ಸೋಮಶಟ್ಟಿಹಳ್ಳಿ,‌ಲಕ್ಷ್ಮೀಪುರ ಗ್ರಾಮದ ನೂರಾರು ಜೆಡಿಎಸ್ ಕಾರ್ಯಕರ್ತರನ್ನು ಬಿಜೆಪಿಗೆ ಬರಮಾಡಿಕೊಂಡ ನಂತರ ಮಾತನಾಡಿದ ಮಾಜಿ ಶಾಸಕ ಎಸ್ ಮುನಿರಾಜು,ಬಿಜೆಪಿ ಸರ್ಕಾರ ಅನುಧಾನ ತಡೆಹಿಡಿದಿದೆ ಎಂದು ಅಪಪ್ರಚಾರ ಮಾಡುತ್ತಾ ಅಭಿವೃದ್ಧಿ ಮಾಡದೇ ಬರೀ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಶಾಸಕ ಆರ್.ಮಂಜುನಾಥ್ ವಿರುದ್ಧ ಕಿಡಿಕಾರಿದರು. ‌

ದಾಸರಹಳ್ಳಿ ಕ್ಷೇತ್ರದಲ್ಲಿ ಬರೀ ಅಪಪ್ರಚಾರ ಹಾಗೂ ಸುಳ್ಳು ಹೇಳಿಕೊಂಡು ಪ್ರಚಾರ ಪಡೆಯುತ್ತಿರುವುದೇ ಶಾಸಕರ ಕೆಲಸವಾಗಿದೆ ಎಂದು ನಿಕಟಪೂರ್ವ ಶಾಸಕ ವಾಗ್ದಾಳಿ ನಡೆಸಿದರು. ಅಲ್ಲದೇ ಇತ್ತೀಚೆಗಷ್ಟೆ ಹೆಸರುಘಟ್ಟ ಮುಖ್ಯರಸ್ತೆ ಅಭಿವೃದ್ಧಿ ಮಾಡಲು ರಾಜ್ಯ ಬಿಜೆಪಿ ಸರ್ಕಾರ 15 ಕೋಟಿ ಹಣ ಮುಂಜೂರು ಮಾಡಿತ್ತು ಆದರೆ ಶಾಸಕ‌ ಮಂಜುನಾಥ್ ಅಭಿವೃದ್ಧಿ ಮಾಡದೇ ಕೇವಲ ಮೂರುವರೆ ಕೋಟಿ ಖರ್ಚು ಮಾಡಿ ಇನ್ನುಳಿದ ಎಲ್ಲಾ ಹಣವನ್ನು ನುಂಗಲು ಪ್ರಯತ್ನ ಮಾಡಿರುವುದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಿಂದ ಬಹಿರಂಗಗೊಂಡಿದ್ದು ಅಭಿವೃದ್ಧಿಗೋಸ್ಕರ ತಡೆಹಿಡಿಯುವಂತೆ ಲೋಕಾಯುಕ್ತಕ್ಕೆ ವಲಯ ಜಂಟಿ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದರು.

ಇನ್ನೂ ಕ್ಷೇತ್ರದ ತುಂಬೆಲ್ಲ ಬರೀ ಕಳಪೆ ಕಾಮಗಾರಿ ಮಾಡುತ್ತಿರುವ ಶಾಸಕ ಮಹಾಶಯ ಇನ್ನಾದರೂ ಸುಳ್ಳು ಪ್ರಚಾರ ಮಾಡುವುದು ಬಿಟ್ಟು ಅಭಿವೃದ್ಧಿ ಮಾಡಲಿ ಎಂದು ಕಿಡಿಕಾರಿದ ಮುನಿರಾಜು 2013 ರಲ್ಲಿ ರಾಜ್ಯದ ತುಂಬೆಲ್ಲಾ ಕಾಂಗ್ರೆಸ್ ಅಲೆ ಎದ್ದಿದ್ದರೂ ಕೂಡ ದಾಸರಹಳ್ಳಿ ಜನ ಬಿಜೆಪಿ ಪಕ್ಷವನ್ನು ಕೈ ಹಿಡಿದರು ಆ ಋಣ ತೀರಿಸುವ ಹೊಣೆ ನನ್ನ ಮೇಲಿದೆ ಆದರೆ 2018 ರ‌ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಕುಟಿಲತನದಿಂದ ನಾನು ಸೋಲಬೇಕಾಯಿತು ಆದರೆ ಬಿಜೆಪಿ ಪಕ್ಷ ಸೋಲಲಿಲ್ಲ ಎಂದರು. ಒಟ್ಟಾರೆ ಚುನಾವಣಾ ವರ್ಷ ಶುರುವಾಗುತ್ತಿದ್ದಂತೆ‌ ರಾಜಕೀಯ ನಾಯಕರು ಮತದಾರನ‌ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

ದಾಸರಹಳ್ಳಿ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ: ಇನ್ನೂ ದಾಸರಹಳ್ಳಿ‌ ಕ್ಷೇತ್ರಕ್ಕೆ‌ ಬರುವುದಾದರೆ ಒಟ್ಟು 437077 ಮತದಾರರಿರುವ ದಾಸರಹಳ್ಳಿ ಕ್ಷೇತ್ರದಲ್ಲಿ 170000 ಒಕ್ಕಲಿಗ ಮತದಾರರು, 90000 ಎಸ್.ಎಸ್ಟಿ ಮತದಾರರು, 80000 ಓಬಿಸಿ ಮತದಾರರು, 43000 ಲಿಂಗಾಯತ ಮತದಾರರು, 25000 ಬ್ರಾಹ್ಮಣ ಮತದಾರರು, 29000 ಇತರೆ ಮತದಾರರಿದ್ದು ಕ್ಷೇತ್ರದಲ್ಲಿ ಒಕ್ಕಲಿಗ ಹಾಗೂ ಎಸ್ ಸಿ ಎಸ್ ಟಿ ಮತ IPOದಾರರೆ ನಿರ್ಣಾಯಕರಾಗಿದ್ದು ಯಾರ‌ಪರ ಇವರು ನಿಲ್ಲುತ್ತಾರೊ ಅವರು ಜಯಗಳಿಸುವುದು ಖಚಿತವಾಗಿದೆ.


Spread the love

By admin