Spread the love

ತಾನು ಕೆಲಸಕ್ಕಿದ್ದ ಚಿನ್ನದ ಅಂಗಡಿಯಿಂದಲೇ 50 ಲಕ್ಷ ರೂಪಾಯಿಗಳಿಗೂ ಅಧಿಕ ಮೌಲ್ಯದ ಆಭರಣಗಳನ್ನು ಕದ್ದಿದ್ದ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಬೀದರ್ ನ ವಾಣಿ ವಾಡೇಕರ್ ಎಂಬಾಕೆಯನ್ನು ಈಗ ಬಂಧಿಸಲಾಗಿದೆ.

 

ಯಲಹಂಕದ ಆರ್ ಎಂ ಜೆಡ್ ಗೆಲಾರಿಯಾ ಮಾಲ್ ನಲ್ಲಿರುವ ತನಿಷ್ಕಾ ಜುವೆಲರ್ಸ್ ನಲ್ಲಿ ಈಕೆ ಮಾರುಕಟ್ಟೆ ಪ್ರತಿನಿಧಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದು, ಆಗಾಗ ಚಿನ್ನಾಭರಣ ಎಗರಿಸುತ್ತಿದ್ದಳು ಎನ್ನಲಾಗಿದೆ.

ಈಕೆಯ ವರ್ತನೆಯಿಂದ ಅನುಮಾನಗೊಂಡಿದ್ದ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ 58.60 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಜ್ರದ ಆಭರಣ ಕಳವು ಮಾಡಿರುವುದು ಗೊತ್ತಾಗಿದೆ. ಅವುಗಳನ್ನು ಜಫ್ತಿ ಮಾಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


Spread the love

By admin