Spread the love

ಹೊಸ ವರ್ಷದಂದು ಆರ್ಡರ್ ಮಾಡಿದ್ದ ಬಿರಿಯಾನಿ ತಿಂದಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕೇರಳದಲ್ಲಿ ಫುಡ್ ಪಾಯ್ಸನ್ ನಿಂದ ಸಾವನ್ನಪ್ಪುತ್ತಿರುವ ಇಂತಹ ಪ್ರಕರಣಗಳು ಬೆಚ್ಚಿಬೀಳಿಸಿವೆ.

ಅನುಮಾನಾಸ್ಪದ ಆಹಾರ ವಿಷದಿಂದಾಗಿ ನರ್ಸ್ ಸಾವನ್ನಪ್ಪಿದ ಆರು ದಿನಗಳ ನಂತರ, 19 ವರ್ಷದ ಯುವತಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದಾಳೆ.

 

ಅಂಜು ಶ್ರೀ ಪಾರ್ವತಿ ಅವರು ತಮ್ಮ ಸ್ನೇಹಿತರ ಜೊತೆಗೆ ಕರ್ನಾಟಕದ ಮಂಗಳೂರಿನ ಗಡಿಯಲ್ಲಿರುವ ಕಾಸರಗೋಡಿನಲ್ಲಿ ಹೊಸ ವರ್ಷವನ್ನು ಆಚರಿಸಲು ಆನ್‌ಲೈನ್‌ನಲ್ಲಿ ಬಿರಿಯಾನಿಯನ್ನು ಆರ್ಡರ್ ಮಾಡಿದ್ದರು.

ಬಿರಿಯಾನಿ ತಿಂದ ನಂತರ ಅಸ್ವಸ್ಥಗೊಂಡಿದ್ದ ಆಕೆ ಮತ್ತು ಆಕೆಯ ಸ್ನೇಹಿತರನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಅಂಜು ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಕೊಟ್ಟಾಯಂ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಕಳೆದ ವಾರ ಹೋಟೆಲ್‌ನಿಂದ ತರಿಸಿದ ಆಹಾರ ಸೇವಿಸಿದ ನಂತರ ಸಾವನ್ನಪ್ಪಿದರು. ಈ ಬಗ್ಗೆ ದೂರುಗಳ ನಂತರ ಅದರ ಪರವಾನಗಿಯನ್ನು ರದ್ದುಗೊಳಿಸಲಾಯಿತು.


Spread the love

By admin