ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಕೈಗೊಂಡಿರುವ ಕೋಲಾರ ಪ್ರವಾಸ ಭಾರಿ ಮಹತ್ವ ಪಡೆದುಕೊಂಡಿದ್ದು, ಕೋಲಾರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇಂದು ಬಹುತೇಕ ಘೋಷಣೆ ಮಾಡುವ ಸಾಧ್ಯತೆ ಇದೆ.
ಇಂದಿನ ಸಮಾವೇಶದಲ್ಲಿ ಅವರು ಸ್ಪರ್ಧೆ ಬಗ್ಗೆ ಬಹಿರಂಗವಾಗಿ ಘೋಷಣೆ ಮಾಡುವ ನಿರೀಕ್ಷೆ ಇದೆ.
ಇದಕ್ಕಾಗಿಯೇ ಸಮಾವೇಶ ಆಯೋಜಿಸಲಾಗಿದೆ. ಮಧ್ಯಾಹ್ನ 12 15ಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ಕೋಲಾರದ ಕುರುಬರ ಪೇಟೆ ಕ್ರೀಡಾಂಗಣದಲ್ಲಿ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋಲಾರದಿಂದ ಸ್ಪರ್ಧೆಯ ಬಗ್ಗೆ ಘೋಷಿಸಲಿದ್ದು, ಒಂದು ವೇಳೆ ಗೋಷಣೆ ಮಾಡದಿದ್ದರೆ, ಒಂದಿಷ್ಟು ರಾಜಕೀಯ ಲೆಕ್ಕಾಚಾರ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.