Spread the love

ದಾವಣಗೆರೆ: ಆರ್ ಟಿ ಐ ಕಾರ್ಯಕರ್ತ ರಾಮಕೃಷ್ಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ದಾವಣಗೆರೆಯ ಜಗಳೂರಿನ ಹೊಸಕೆರೆ ಡಾಬಾದಲ್ಲಿ ಆರ್ ಟಿ ಐ ಕಾರ್ಯಕರ್ತ ರಾಮಕೃಷ್ಣ ಅವರನ್ನು ಜ.7ರಂದು ಹತ್ಯೆ ಮಾಡಲಾಗಿತ್ತು.

ಹಳೆ ಧ್ವೇಷದ ಹಿನ್ನೆಲೆಯಲಿ ಗ್ಯಾಂಗ್ ವೊಂದು ರಾಮಕೃಷ್ಣ ಅವರ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ, ಕಲ್ಲು ಎತ್ತಿಹಾಕಿ ಕೊಲೆಗೈದಿತ್ತು. ಈ ಕೊಲೆಗೆ ಹಿರೇಮಲ್ಲನಹೊಳೆ ಗ್ರಾಮ ಪಂಚಾಯತಿ ಪಿಡಿಓ ನಾಗರಾಜ್ ಪ್ರಮುಖ ಆರೋಪಿ ಎಂದು ಸಂಬಂಧಿಕರು ಆರೋಪಿಸಿದ್ದರು. ನಾಗರಾಜ್ ಬಂಧನಕ್ಕಾಗಿ ಪ್ರತಿಭಟನೆ ನಡೆಸಿದ್ದರು.

ಇದೀಗ ರಾಮಕೃಷ್ಣ ಹತ್ಯೆಯಾದ ಮರುದಿನವೇ ಪಿಡಿಓ ನಾಗರಾಜ್ ಗ್ರಾಮಪಂಚಾಯಿತಿ ಖಾತೆಯಿಂದ 21 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿಕೊಂಡು ಪರಾರಿಯಾಗಿದ್ದಾನೆ. ಇದಕ್ಕೆ ಪಂಚಾಯತ್ ಅಧ್ಯಕ್ಷರೇ ಸಾಥ್ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


Spread the love

By admin