Spread the love

ಹೈದರಾಬಾದ್​ ಮೂಲದ ಸಾಯಿ ಬಾಬಾ ಭಕ್ತ ರಾಜೇಶ್ವರ್​ ಎಂಬುವವರು ಸಾಯಿ ಸಂಸ್ಥಾನಕ್ಕೆ 25 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಡಿಡಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಮೂಲಕ ಅವರು ಸಾಯಿ ಬಾಬಾ ಅವರಿಗೆ ವಿಶೇಷ ರೀತಿಯಲ್ಲಿ ಭಕ್ತಿ ಸಮರ್ಪಣೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜೇಶ್ವರ್,​ ”ಸಾಯಿಬಾಬಾ ಅವರು ನನಗೆ ಕೊಟ್ಟಿದ್ದನ್ನು ವಾಪಸ್​​ ಹಿಂದಿರುಗಿಸುತ್ತಿದ್ದೇನೆ, ದೇವರ ಸೇವೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಾಯಿಬಾಬಾ ಅವರು ತಮ್ಮ ಜೀವಿತಾವಧಿಯಲ್ಲಿ ಆರೋಗ್ಯ ಭಾಗ್ಯ ಎಂದು ನಂಬಿ ಆರೋಗ್ಯ ರಕ್ಷಣೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು.

ಅದೇ ರೀತಿ, ಸಾಯಿ ಸಂಸ್ಥಾನ ಕೂಡ ಬಾಬಾ ಅವರು ಮಾಡುತ್ತಿದ್ದ ಆರೋಗ್ಯ ಸೇವೆಯನ್ನು ಮುಂದುವರಿಸಿಕೊಂಡು ಬಂದಿದೆ. ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಶಿರಡಿ ಕ್ಷೇತ್ರದಲ್ಲಿ ಉಚಿತ ಆಸ್ಪತ್ರೆ ಕಟ್ಟಿಸಿದ್ದಾರೆ. ಇದರಿಂದಾಗಿ ಎಷ್ಟೋ ಬಡ ಕುಟುಂಬಗಳಿಗೆ ಅನುಕೂಲವಾಗತ್ತಿದೆ. ಅದಕ್ಕಾಗಿ ಸಾಯಿ ಸಂಸ್ಥಾನಕ್ಕೆ ಒಂದು ಕೋಟಿ ದೇಣಿಗೆ ನೀಡಿದ್ದೇನೆ” ಎಂದು ಹೇಳಿದ್ದಾರೆ.

ಆಸ್ಪತ್ರೆಗೆ ಎಕ್ಸ್​ ರೇ ಯಂತ್ರ ದೇಣಿಗೆ ನೀಡಲು ಮುಂದಾದ ಭಕ್ತ: ದೇಶಾದ್ಯಂತ ಶಿರಡಿ ಸಾಯಿಬಾಬಾ ಭಕ್ತರಿದ್ದು, ನಿತ್ಯ ಶಿರಡಿ ಸಾಯಿಬಾಬಾ ಸನ್ನಿದಿಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಹಾಗೇ ಅತಿ ಹೆಚ್ಚು ಭಕ್ತರು ಆಗಮಿಸುವುದರಿಂದ ದೇವಸ್ಥಾನಕ್ಕೆ ದೇಣಿಗೆಯು ಸಹ ದೊಡ್ಡ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಸುಬ್ಬಾ ರೆಡ್ಡಿ ಎಂಬ ಭಕ್ತರೊಬ್ಬರು ಸಾಯಿ ಸಂಸ್ಥಾನ ನಡೆಸುತ್ತಿರುವ ಆಸ್ಪತ್ರೆಗೆ ಬರೋಬ್ಬರಿ 46 ಲಕ್ಷ ಮೌಲ್ಯದ ಎಕ್ಸ್​ ರೇ ಯಂತ್ರವನ್ನು ದೇಣಿಗೆ ಯಾಗಿ ನೀಡಲು ಸಂಕಲ್ಪ ಮಾಡಿಕೊಂಡಿದ್ದಾರೆ.


Spread the love

By admin