Spread the love

ಇಂದೋರ್‌ನ ಬೆಂಗಾಲಿ ಕಾಲೋನಿ ಪ್ರದೇಶದ ಶಿಖಾ ಜೈನ್ ಅವರು ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಅಂತಿಮ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಮತ್ತು ಅಖಿಲ ಭಾರತ ಮಟ್ಟದಲ್ಲಿ ಎರಡನೇ ರ‍್ಯಾಂಕ್ ಗಳಿಸಿದ್ದಾರೆ.

ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನವೆಂಬರ್ 2022 ರ ಅವಧಿಯ ಸಿಎ ಪರೀಕ್ಷೆಯ ಫಲಿತಾಂಶಗಳನ್ನು ಮಂಗಳವಾರ ಪ್ರಕಟಿಸಿದೆ. ಶಿಖಾ ಅವರು ಸಿಎ ತಯಾರಿಗಾಗಿ ಯಾವುದೇ ಔಪಚಾರಿಕ ತರಬೇತಿ ಪಡೆಯದಿರುವುದು ವಿಶೇಷವಾಗಿದೆ. ಈಗಾಗಲೇ ಸಿಎ ಆಗಿರುವ ಹಿರಿಯ ಸಹೋದರಿ ದಿಶಾ ಜೈನ್ ಅವರು ಶಿಖಾ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ಶಿಖಾ 800ಕ್ಕೆ 617 ಅಂಕ ಗಳಿಸಿದ್ದಾರೆ. ಶಿಖಾ ತನ್ನ ಶಾಲಾ ಶಿಕ್ಷಣವನ್ನು ಸೇಂಟ್ ಅರ್ನಾಲ್ಡ್ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ.

ಸಾಧನೆಯ ಗುಟ್ಟೇನು?: ಮಾಧ್ಯಮದವರೊಂದಿಗೆ ಮಾತನಾಡಿದ ಶಿಖಾ, ”ನನ್ನ ಸಹೋದರಿ ಕೂಡ ಸಿಎ ಆಗಿದ್ದಾರೆ. ಅವಳು ಕಷ್ಟಪಟ್ಟು ಕೆಲಸ ಮಾಡುತ್ತ ಸಿಎ ಆಗಿರುವುದನ್ನು ನಾನು ನೋಡುತ್ತಲೇ ಬೆಳೆದಿದ್ದೇನೆ. ನಾನು 12 ನೇ ತರಗತಿಯಲ್ಲಿ ಉತ್ತೀರ್ಣರಾದ ವೇಳೆಯೇ ಸಿಎ ಮಾಡಬೇಕೆಂದು ನಿರ್ಧರಿಸಿದ್ದೆ. ಆದರೆ, ಇದು ಸುಲಭವಾಗಿರಲಿಲ್ಲ. ನನ್ನ ಸಹೋದರಿಯ ಮಾರ್ಗದರ್ಶನ ಮತ್ತು ಕುಟುಂಬದ ನಿರಂತರ ಬೆಂಬಲದಿಂದ ನಾನು ಐಸಿಎಐ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಯಿತು” ಎಂದು ಅವರು ಹೇಳಿದರು.


Spread the love

By admin