Spread the love

ಕಾಸರಗೋಡು: ಕೇರಳದ ಪ್ರಸಿದ್ಧ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯದಲ್ಲಿ ಮಕರ ಸಂಕ್ರಾಂತಿ ವಿಶೇಷ ಪೂಜಾ ಕಾರ್ಯಗಳು ಆರಂಭವಾಗಿವೆ.

ಮಕರ ಜ್ಯೋತಿ ಉತ್ಸವದ ಅಂಗವಾಗಿ ಅಯ್ಯಪ್ಪ ಸ್ವಾಮಿ ವಿಗ್ರಹಕ್ಕೆ ತೊಡಿಸುವ ಪವಿತ್ರ ಆಭರಣಗಳ ಶೋಭಾಯಾತ್ರೆ ಗುರುವಾರ ಪಂದಳ ಅರಮನೆಯಿಂದ ಆರಂಭವಾಗಿದೆ.

ಕಾಡುದಾರಿಯ ಮೂಲಕ ಆಭರಣ ಶೋಭಾಯಾತ್ರೆ ಸಾಗಲಿದ್ದು ಜನವರಿ 14ರಂದು ಅಯ್ಯಪ್ಪ ಸ್ವಾಮಿ ಸನ್ನಿಧಾನ ತಲುಪಲಿದೆ. ಸಂಜೆ ಆವರಣ ಪೆಟ್ಟಿಗೆಗಳನ್ನು ಗರ್ಭಗುಡಿಗೆ ಕೊಂಡೊಯ್ದು ಸ್ವಾಮಿಯ ವಿಗ್ರಹಕ್ಕೆ ಆಭರಣ ತೊಡಿಸಿ ಅಲಂಕಾರ, ವಿಶೇಷ ಪೂಜೆ, ದೀಪಾರಾಧನೆ ನೆರವೇರಿಸಲಾಗುತ್ತದೆ. ನಂತರ ಕಾಂತಮಲೆಯಲ್ಲಿ ಮಕರ ಜ್ಯೋತಿ ಪ್ರಜ್ವಲಿಸಲಿದ್ದು, ಅಪಾರ ಸಂಖ್ಯೆಯ ಭಕ್ತರು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.


Spread the love

By admin