Spread the love

ವದೆಹಲಿ: ಕೇಂದ್ರದ ಮಾಜಿ ಸಚಿವ ಮತ್ತು ಆರ್‌ಜೆಡಿ ನಾಯಕ ಶರದ್ ಯಾದವ್(75) ಅವರು ರಾತ್ರಿ ನಿಧನರಾಗಿದ್ದಾರೆ.ಅವರ ಪುತ್ರಿ ಸುಭಾಷಿಣಿ ಶರದ್ ಯಾದವ್ ಅವರು ಟ್ವಿಟ್ಟರ್‌ನಲ್ಲಿ “ಪಾಪಾ ನಹೀ ರಹೇ (ಪಾಪಾ ಇನ್ನಿಲ್ಲ)” ಎಂದು ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಮಾಜಿ ಸಚಿವರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಅವರನ್ನು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶರದ್ ಯಾದವ್ ಅವರನ್ನು ಪ್ರಜ್ಞಾಹೀನ ಮತ್ತು ಸ್ಪಂದಿಸದ ಸ್ಥಿತಿಯಲ್ಲಿ ತುರ್ತು ವಿಭಾಗಕ್ಕೆ ದಾಖಲಿಸಲಾಗಿತ್ತು. ಅವರಿಗೆ ಯಾವುದೇ ನಾಡಿಮಿಡಿತ ಅಥವಾ ರೆಕಾರ್ಡ್ ಮಾಡಬಹುದಾದ ರಕ್ತದೊತ್ತಡ ಇರಲಿಲ್ಲ ಎಂದು ಆಸ್ಪತ್ರೆ ಹೇಳಿಕೆ ನೀಡಿದೆ.

ಆರೋಗ್ಯ ಅಧಿಕಾರಿಗಳ ಉತ್ತಮ ಪ್ರಯತ್ನದ ಹೊರತಾಗಿಯೂ ಯಾದವ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾತ್ರಿ 10:19 ಕ್ಕೆ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.ದೇಶದ ಅತ್ಯುನ್ನತ ಸಮಾಜವಾದಿ ನಾಯಕರಲ್ಲಿ ಒಬ್ಬರಾದ ಯಾದವ್ ಅವರು ದಶಕಗಳ ಕಾಲ ಜನತಾ ರಾಜಕೀಯದ ಕೇಂದ್ರಬಿಂದುವಾಗಿದ್ದರು.


Spread the love

By admin