Spread the love

ಮೈಸೂರು; ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದ್ದ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು ಗುಜರಾತ್ ನ ಅಹಮದಾಬಾದ್ ನಲ್ಲಿ ಇಂದು ಬಂಧಿಸಲಾಗಿದೆ. ಸ್ಯಾಂಟ್ರೋ ರವಿ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿರುವುದಾಗಿ ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

 

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅಲೋಕ್ ಕುಮಾರ್, ಸ್ಯಾಂಟ್ರೋ ರವಿ, ರಾಮ್ ಜಿ, ಸತೀಶ್, ಮಧುಸೂಧನ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ. 2005ರಲ್ಲಿ ಒಮ್ಮೆ ಗೂಂಡಾ ಕಾಯ್ದೆಯಡಿಯಲ್ಲಿ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿತ್ತು. 11 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದ. ಸ್ಯಾಂಟ್ರೋ ರವಿ ಒಬ್ಬ ವೈಟ್ ಕಾಲರ್ ಕ್ರಿಮಿನಲ್ ಎಂದು ತಿಳಿಸಿದ್ದಾರೆ.

ಸ್ಯಾಂಟ್ರೋ ರವಿ ಕ್ರಿಮಿನಲ್ ಮೈಂಡ್ ಮೂಲಕ ಪೊಲೀಸರ ದಿಕ್ಕುತಪ್ಪಿಸುತ್ತಿದ್ದ. ಪೊಲೀಸರ ಕೈಗೆ ಸಿಗದಂತೆ ಮೊಬೈಲ್, ಸಿಮ್ ಚೇಂಜ್ ಮಾಡುತ್ತಿದ್ದ. ತನ್ನ ಗೆಟಪ್, ವೇಷಭೂಷಣವನ್ನು ಬದಲಿಸಿಕೊಂಡಿದ್ದ. ಲೋಕೇಷನ್ ಗೊತ್ತಾಗಬಾರದೆಂದು ಸಿಮ್ ಬದಲಾಯಿಸುತ್ತಿದ್ದ. ಇಂದು ಬೆಳಿಗ್ಗೆ 11 ಗಂಟೆಗೆ ಆತ ಗುಜರಾತ್ ಗೆ ಎಂಟ್ರಿಯಾಗಿದ್ದ. ಮೈಸೂರು ಪೊಲೀಸರು ಗುಜರಾತ್ ಪೊಲೀಸರ ಸಹಾಯದಿಂದ ಸ್ಯಾಂಟ್ರೋ ರವಿಯನ್ನು ಬಂಧಿಸಿದ್ದಾರೆ ಎಂದು ವಿವರಿಸಿದರು.


Spread the love

By admin