Spread the love

ಬಾಲಿವುಡ್‌ ನಟ ರಣದೀಪ್ ಹೂಡಾ ಕುದುರೆ ಸವಾರಿ ವೇಳೆ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸದ್ಯ ಅವರನ್ನು ಚಿಕಿತ್ಸೆಗಾಗಿ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುದುರೆ ಸವಾರಿ ಮಾಡ್ತಿದ್ದಾಗ ಇದ್ದಕ್ಕಿದ್ದಂತೆ ರಣದೀಪ್‌ ಹೂಡಾಗೆ ಪ್ರಜ್ಞೆ ತಪ್ಪಿದೆ, ಅವರು ಕುದುರೆ ಮೇಲಿಂದ ಕೆಳಕ್ಕೆ ಬಿದ್ದಿದ್ದಾರೆ.

 

ತೀವ್ರ ಗಾಯಗೊಂಡಿದ್ದ ನಟನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ರಣದೀಪ್‌ ಹೂಡಾ ಕುದುರೆ ಸವಾರಿಯಲ್ಲಿ ಸಾಕಷ್ಟು ನಿಪುಣತೆ ಪಡೆದಿದ್ದಾರೆ. ಕುದುರೆ ಫಾರ್ಮ್‌ ಕೂಡ ಹೊಂದಿದ್ದಾರೆ. ಪೋಲೋ ಮತ್ತು ಶೋ ಜಂಪಿಂಗ್ ಸೇರಿದಂತೆ ವೃತ್ತಿಪರ ಕುದುರೆ ಸವಾರಿಯ ಕ್ರೀಡೆಗಳಲ್ಲಿ ಸಹ ಭಾಗವಹಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್‌ ಚಿತ್ರಕ್ಕಾಗಿ ಸದ್ಯ ರಣದೀಪ್‌ ಹೂಡಾ ತಯಾರಿ ನಡೆಸುತ್ತಿದ್ದರು. ಇದಕ್ಕಾಗಿ 22 ಕೆಜಿ ತೂಕ ಇಳಿಸಿಕೊಂಡಿದ್ದರು. ಈಗ ಕುದುರೆ ಮೇಲಿನಿಂದ ಬಿದ್ದಿದ್ದರಿಂದ ರಣದೀಪ್‌ ಮೊಣಕಾಲಿಗೆ ತೀವ್ರ ಗಾಯವಾಗಿದೆ. ಎಡ ಕಾಲಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಬಂದರೂ ಬರಬಹುದು. ಸದ್ಯಕ್ಕೆ ಸಂಪೂರ್ಣ ಬೆಡ್‌ ರೆಸ್ಟ್‌ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

2021ರಲ್ಲಿ ರಾಧೆ ಚಿತ್ರದ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ಮಾಡುವಾಗ ರಣದೀಪ್ ಗಾಯಗೊಂಡಿದ್ದರು. ಅವರ ಬಲ ಮೊಣಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸದ್ಯ ಇಲಿಯಾನಾ ಡಿ ಕ್ರೂಜ್‌ ಜೊತೆ ತೇರಾ ಕ್ಯಾ ಹೋಗಾ ಲವ್ಲಿ ಚಿತ್ರದಲ್ಲಿ ರಣದೀಪ್‌ ನಟಿಸ್ತಿದ್ದಾರೆ. ಇತ್ತೀಚೆಗೆ ನೆಟ್‌ಫ್ಲಿಕ್ಸ್ನಲ್ಲಿ ಬಿಡುಗಡೆಯಾದ ಥ್ರಿಲ್ಲರ್ ಸರಣಿ CAT ನಲ್ಲಿ ಸಹ ಕಾಣಿಸಿಕೊಂಡಿದ್ದರು.


Spread the love

By admin