Spread the love

ಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿರುವ ಸ್ವಾಮಿನಾರಾಯಣ ಮಂದಿರದ ಗೋಡೆಗಳ ಮೇಲೆ ಕಿಡಿಗೇಡಿಗಳು ಹಿಂದೂ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರೋಧಿ ಘೋಷಣೆಗಳನ್ನು ಬರೆದಿದ್ದಾರೆ.

ಹಿಂದೂಸ್ತಾನ್ ಮುರ್ದಾಬಾದ್, ಮೋದಿ ಹಿಟ್ಲರ್ ಇತ್ಯಾದಿ ಘೋಷಣೆಗಳನ್ನು ಕಿಡಿಗೇಡಿಗಳು ಬರೆದಿದ್ದು ಅಲ್ಲದೆ ಭಿಂದ್ರನ್ ವಾಲೆ ಪರ ಘೋಷಣೆಗಳನ್ನು ಸಹ ಬರೆಯಲಾಗಿದೆ.

ಹೀಗಾಗಿ ಇದು ಖಲಿಸ್ತಾನ್ ಬೆಂಬಲಿಗರ ಕೃತ್ಯ ಎಂದು ಶಂಕಿಸಲಾಗಿದೆ.

ಕಿಡಿಗೇಡಿಗಳ ಕೃತ್ಯವನ್ನು ವಿಕ್ಟೋರಿಯಾ ರಾಜ್ಯದ ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ ಖಂಡಿಸಿದ್ದು, ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದೆ.


Spread the love