Spread the love

ಬೆಂಗಳೂರು: ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವದ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

ಯಶವಂತಪುರ -ಕೂಚುವೇಲಿ ಎಕ್ಸ್ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಬೋಗಿ, ವೇಲಾಂಕಣಿ ವಾಸ್ಕೋಡ ಗಾಮ ಎಕ್ಸ್ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಬೋಗಿ ಪ್ರತ್ಯೇಕವಾಗಿ ಅಳವಡಿಸಲಾಗುವುದು.

ಜನವರಿ 28ರಂದು ಕೆ.ಎಸ್.ಆರ್. ಬೆಂಗಳೂರು -ಎಸ್.ಎಸ್.ಎಸ್. ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುವುದು.

ಜನವರಿ 25 ರಂದು ಯಶವಂತಪುರ -ವಾಸ್ಕೋಡ ಗಾಮ ಎಕ್ಸ್ಪ್ರೆಸ್ ರೈಲಿಗೆ ಸ್ಲೀಪರ್ ಬೋಗಿ ಜೋಡಿಸಲಾಗುತ್ತದೆ. ಜನವರಿ 23 ರಂದು ವಾಸ್ಕೋಡ ಗಾಮ -ವೇಲಾಂಕಣಿ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜನವರಿ 24ರಂದು ವೇಲಾಂಕಣಿ- ವಾಸ್ಕೋಡ ಗಾಮ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುವುದು.

ಜನವರಿ 15 ರಿಂದ 19 ರವರೆಗೆ ಯಶವಂತಪುರ -ಕೂಚುವೆಲಿ ಎಕ್ಸ್ಪ್ರೆಸ್ ರೈಲಿಗೆ ಒಂದು ಎಸಿ 3 ಟಯರ್ ಸ್ಲೀಪರ್ ಬೋಗಿ, ಜನವರಿ 16 ರಿಂದ 20ರವರೆಗೆ ಕೂಚುವೆಲಿ -ಯಶವಂತಪುರ ಎಕ್ಸ್ಪ್ರೆಸ್ ರೈಲಿಗೆ ಒಂದು ಎಸಿ 3 ಟೈರ್ ಸ್ಲೀಪರ್ ಬೋಗಿ ಅಳವಡಿಸಲಾಗುವುದು ಎಂದು ಹೇಳಲಾಗಿದೆ.


Spread the love

By admin