Spread the love

ರಾಮನಗರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ನಡೆದಿದೆ.ತಾಯಿ ವಿಜಯಲಕ್ಷ್ಮಿ(50) ಹಾಗೂ ಮಗ ಹರ್ಷ(25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಊಟದ ವಿಚಾರಕ್ಕೆ ತಾಯಿ, ಮಗನ ನಡುವೆ ಜಗಳವಾಗಿದೆ.

ಇದರಿಂದ ಮನನೊಂದು ತಾಯಿ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಬಳಿಯ ನೀರಿನ ಸಂಪಿಗೆ ಬಿದ್ದು ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿಯ ಸಾವಿನ ವಿಚಾರ ತಿಳಿದು ಮಗ ಹರ್ಷ ನೇಣಿಗೆ ಶರಣಾಗಿದ್ದಾರೆ. ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

By admin