Spread the love

ಕೊರೊನಾ ಚೀನಾದಲ್ಲಿ ಆರ್ಭಟಿಸ್ತಾ ಇದ್ರೂ ಅಲ್ಲಿನ ಸರ್ಕಾರ ಮಾತ್ರ ಸಾವು-ನೋವುಗಳ ಪಕ್ಕಾ ಲೆಕ್ಕವನ್ನು ಬಹಿರಂಗಪಡಿಸಿರಲಿಲ್ಲ. ಕೊನೆಗೂ ಕೋವಿಡ್‌ಗೆ ಚೀನಾದಲ್ಲಿ ಬಲಿಯಾದವರ ನಿಖರ ಸಂಖ್ಯೆ ಈಗ ಲಭ್ಯವಾಗಿದೆ.

ಮಾಹಿತಿಯ ಪ್ರಕಾರ ಡಿಸೆಂಬರ್ 8 ರಿಂದ ಜನವರಿ 12ರ ನಡುವೆ ಅಂದರೆ 36 ದಿನಗಳಲ್ಲಿ ಚೀನಾದಲ್ಲಿ ಕೊರೊನಾ ಸೋಂಕಿನಿಂದ 60 ಸಾವಿರ ಜನರು ಸಾವನ್ನಪ್ಪಿದ್ದಾರೆ.

ಚೀನಾ ಸಾವಿನ ಸಂಖ್ಯೆಯನ್ನು ಬಿಡುಗಡೆ ಮಾಡಿರುವುದು ಇದೇ ಮೊದಲು.

ಶೂನ್ಯ ಕೋವಿಡ್ ನೀತಿಯನ್ನು ಸಡಿಲಿಸಿದ ನಂತರ ಚೀನಾದಲ್ಲಿ ದಿಢೀರನೆ ಕೋವಿಡ್‌ ಪ್ರಕರಣಗಳಲ್ಲಿ ಹೆಚ್ಚಳವಾಗಿತ್ತು. ಚೀನಾದಲ್ಲಿ ಕೋವಿಡ್‌ಗೆ ತುತ್ತಾದವರ ಪೈಕಿ ಉಸಿರಾಟದ ವೈಫಲ್ಯದಿಂದ 5,503 ಸಾವುಗಳು ಸಂಭವಿಸಿವೆ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ.

ಇದಲ್ಲದೆ, ಕೋವಿಡ್ ಸೋಂಕಿನಿಂದ 54,435 ಜನರು ಸಾವನ್ನಪ್ಪಿದ್ದಾರೆ. ಆದರೆ ಇವರೆಲ್ಲ ಕ್ಯಾನ್ಸರ್ ಅಥವಾ ಹೃದ್ರೋಗದಿಂದ ಬಳಲುತ್ತಿದ್ದರು ಎಂದು ಚೀನಾ ಹೇಳಿಕೊಂಡಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ನ್ಯುಮೋನಿಯಾ ಮತ್ತು ಉಸಿರಾಟದ ವೈಫಲ್ಯದಿಂದ ಸಂಭವಿಸಿದ ಕರೋನಾ ಸಾವುಗಳನ್ನು ಮಾತ್ರ ಚೀನಾ ಎಣಿಕೆ ಮಾಡುತ್ತಿದೆ.

ಈ ಸೂತ್ರವು WHO ವಿಧಾನದಿಂದ ಸಂಪೂರ್ಣವಾಗಿ ಭಿನ್ನವಾಗಿದೆ. ಚೀನಾದಲ್ಲಿ ಮರಣ ಹೊಂದಿದವರ ಸರಾಸರಿ ವಯಸ್ಸು 80.3 ರಷ್ಟಿದೆ. ಮೃತರಲ್ಲಿ ಶೇ.90ರಷ್ಟು ಮಂದಿ 65 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು.


Spread the love

By admin