Spread the love

ಟ ಶಾರುಖ್ ಖಾನ್ ಅವರು ತಮ್ಮ ಚಿತ್ರ ‘ಪಠಾಣ್​’ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ನಡುವೆ ಕೆಲ ದಿನಗಳ ಹಿಂದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ #AskSRK ಶುರು ಮಾಡಿದ್ದರು. ಅಭಿಮಾನಿಗಳು ತಮಗೆ ಏನು ಬೇಕಾದರೂ ಕೇಳಿ ಎನ್ನುವ ಹ್ಯಾಷ್ ​ಟ್ಯಾಗ್​ ಇದು.

 

ಇದರ ಬೆನ್ನಲ್ಲೇ ಸಹಸ್ರಾರು ಪ್ರಶ್ನೆಗಳನ್ನು ಜನರು ಶಾರುಖ್​ ಅವರಿಗೆ ಕೇಳುತ್ತಿದ್ದಾರೆ. ಅವುಗಳಲ್ಲಿ ಕೆಲವೊಂದು ಸೀರಿಯಸ್​ ಆಗಿದ್ದರೆ, ಕೆಲವೊಂದು ತರ್ಲೆ ಪ್ರಶ್ನೆಗಳೂ ಇವೆ. ಇವುಗಳ ಪೈಕಿ ಹಲವಕ್ಕೆ ಶಾರುಖ್​ ಉತ್ತರ ಕೊಟ್ಟಿದ್ದಾರೆ. ಕೆಲವೊಂದು ಸ್ವಲ್ಪ ಅಸಮಾಧಾನದಿಂದಲೇ ಉತ್ತರಿಸಿದ್ದಾರೆ.

ಆದರೆ ಇಲ್ಲೊಬ್ಬ ಬಳಕೆದಾರ ಮಾಡಿರುವ ಕಮೆಂಟ್​ಗೆ ಶಾರುಖ್​ ಫುಲ್​ಖುಷ್​ ಆಗಿದ್ದಾರೆ. ಅದೇನೆಂದರೆ ಈ ಟ್ವಿಟರ್​ ಬಳಕೆದಾರ ಶಾರುಖ್​ ಅವರ ಮೂರು ಚಿತ್ರಗಳ ಕೊಲಾಜ್ ಮಾಡಿದ್ದು ಅದರಲ್ಲಿ ಶಾರುಖ್​ ಖಾನ್​ ಸೆಲ್ಯೂಟ್​ ಮಾಡುವ ದೃಶ್ಯಗಳಿವೆ.

1989 ರಲ್ಲಿ ಪ್ರಸಾರವಾದ ಅವರ ಮೊದಲ ದೂರದರ್ಶನ ಕಾರ್ಯಕ್ರಮ ‘ಫೌಜಿ’, 2004 ರಲ್ಲಿ ಬಿಡುಗಡೆಯಾದ ‘ಮೈ ಹೂ ನಾ’ ಚಲನಚಿತ್ರ ಹಾಗೂ ಈಗ ಬಿಡುಗಡೆಯಾಗಬೇಕಿರುವ ಪಠಾಣ್​ ಚಿತ್ರದಲ್ಲಿ ಶಾರುಖ್​ ಸೆಲ್ಯೂಟ್​ ಹೊಡೆಯುತ್ತಿರುವ ದೃಶ್ಯವಿದೆ.

ಇದನ್ನು ನೋಡಿ ಶಾರುಖ್​ ಖಾನ್​ ಅವರೂ ಸಂತಸ ವ್ಯಕ್ತಪಡಿಸಿದ್ದು, ಇಂಥ ಸೈನಿಕನ ಪಾತ್ರ ಮಾಡಲು ತಮಗೆ ತುಂಬಾ ಇಷ್ಟ. ಇದು ದೇಶಾಭಿಮಾನವನ್ನು ಸಾರುತ್ತದೆ ಎಂದಿದ್ದಾರೆ. ಇದಕ್ಕೆ ಹಲವು ಕಮೆಂಟಿಗರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.


Spread the love