Spread the love

ಹುಬ್ಬಳ್ಳಿ: ನಾ ನಾಯಕಿ ಕಾಂಗ್ರೆಸ್ ಮಹಿಳಾ ಸಮಾವೇಶದ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ವ್ಯಂಗ್ಯವಾಡಿದ್ದು, ನಾ ನಾಯಕಿ ಎಂದು ಯಾರಿಗೆ ಪ್ರಿಯಾಂಕಾ ಗಾಂಧಿವರೇ ಹೇಳಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಪ್ರಿಯಾಂಕಾ ಗಾಂಧಿಯವರಿಗೆ ನಾನು ನಾಯಕಿ ಎಂದು ಸ್ವಯಂ ಹೇಳಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.

 

ಕಾಂಗ್ರೆಸ್ ನವರ ನಾ ನಾಯಕಿ ಸಮಾವೇಶದ ಬಗ್ಗೆ ಜಾಹೀರಾತು ನೋಡಿದ್ದೇನೆ. ಪ್ರಿಯಾಂಕಾ ಗಾಂಧಿ ಅವರು ಜಾಹೀರಾತಿನಲ್ಲಿ ನಾ ನಾಯಕಿ ಎಂದು ಹೇಳಿಕೊಂಡಿದ್ದಾರೆ. ಅವರನ್ನು ನಾಯಕಿ ಮಾಡಲು ಕರ್ನಾಟಕದ ಮಹಿಳೆಯರು ತಯಾರಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಅವರೇ ತಾವೇ ನಾ ನಾಯಕಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಎಂದರು.

ಇನ್ನು ಮಹಿಳೆಯರಿಗಾಗಿ ಕಾಂಗ್ರೆಸ್ ಪ್ರತ್ಯೇಕ ಬಜೆಟ್ ಬಗ್ಗೆಯೂ ಪ್ರತಿಕ್ರಿಯಿಸಿದ ಸಿಎಂ, ಕಾಂಗ್ರೆಸ್ ನವರಿಗೆ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರಿಗೆ ಗೊತ್ತಿದೆ. ಅದಕ್ಕೆ ಏನು ಬೇಕಾದರೂ ಆಶ್ವಾಸನೆ ನೀಡುತ್ತಾರೆ ಎಂದು ಹೇಳಿದರು.


Spread the love

By admin