Spread the love

ರಿಯಾಣದ ಕರ್ನಾಲ್‌ನಲ್ಲಿ ಪಿಟ್‌ಬುಲ್ ನಾಯಿಯ ದಾಳಿಯಿಂದ 12 ವರ್ಷದ ಬಾಲಕ ಗಾಯಗೊಂಡಿದ್ದಾನೆ. ಬಾಲಕನನ್ನು ವಸಂತ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಕರ್ನಾಲ್‌ನ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಂತ್ರಸ್ತನ ಕುಟುಂಬವು ಪೊಲೀಸರಿಗೆ ದೂರು ನೀಡಿದರೆ, ನಾಯಿ ಮಾಲೀಕರು ಸಂತ್ರಸ್ತ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ.

ಘಟನೆಯ ನಂತರ ನಾಯಿಯನ್ನು ಕೊಂದಿದ್ದಾರೆ ಎಂದು ಅದರ ಮಾಲೀಕರು ಆರೋಪಿಸಿದ್ದಾರೆ.

ಎರಡೂ ಕಡೆಯವರಿಂದ ಎರಡು ಪ್ರತ್ಯೇಕ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುನಕ್ ಗ್ರಾಮದ ನಿವಾಸಿ ಮೆಹರ್ ಸಿಂಗ್ ಎಂಬುವರು ನಾಯಿ ಮಾಲೀಕ ಫೂಲ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿಂದೆ ಹಲವಾರು ಮಂದಿಗೆ ನಾಯಿ ಕಚ್ಚಿದ್ದರಿಂದ ನಾಯಿಯನ್ನು ಕಟ್ಟಿ ಹಾಕುವಂತೆ ಫೂಲ್ ಸಿಂಗ್‌ಗೆ ಹಲವು ಬಾರಿ ಕೇಳಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.


Spread the love

By admin