Spread the love

ಮುಂಬೈ: ಮಹಾರಾಷ್ಟ್ರದ ನಾಸಿಕ್ ಭೂಕಂದಾಯ ಇಲಾಖೆಯಿಂದ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ನೋಟಿಸ್ ನೀಡಲಾಗಿದೆ.

ಐಶ್ವರ್ಯಾ ರೈ ಅವರು ನಾಸಿಕ್ ಸಿನ್ನಾರ್ ತಂಗಾವ್ ಸಮೀಪ ಹೊಂದಿರುವ ಭೂಮಿಗೆ ಸರಿಯಾದ ಪ್ರಮಾಣದಲ್ಲಿ ತೆರಿಗೆ ಪಾವತಿಸಿಲ್ಲವೆಂದು ನೋಟಿಸ್ ನೀಡಲಾಗಿದೆ.

ಐಶ್ವರ್ಯಾ ರೈ ನಾಸಿಕ್ ನಲ್ಲಿ ಹೊಂದಿರುವ ಆಸ್ತಿಗೆ ವರ್ಷದಿಂದ ತೆರಿಗೆ ಪಾವತಿಸಿಲ್ಲ. ಈ ಬಗ್ಗೆ ಗಮನಹರಿಸುವಂತೆ ಜಿಲ್ಲಾಡಳಿತ ನೋಟಿಸ್ ನೀಡಿದೆ.

ಒಂದು ಹೆಕ್ಟೇರ್ ನಷ್ಟು ಭೂಮಿಯನ್ನು ಐಶ್ವರ್ಯಾ ರೈ ಹೊಂದಿದ್ದು ಈ ಆಸ್ತಿಗೆ 21,960 ರೂ. ಭೂ ತೆರಿಗೆಯಾಗಿ ಪಾವತಿಸಬೇಕಿದೆ. ನೋಟಿಸ್ ಸ್ವೀಕರಿಸಿದ 10 ದಿನಗಳಲ್ಲಿ ಬಾಕಿ ಮೊತ್ತ ಪಾವತಿಸುವಂತೆ ಜಿಲ್ಲಾಡಳಿತ ಖಡಕ್ ಸೂಚನೆ ನೀಡಿದೆ.


Spread the love

By admin