Spread the love

ತ್ರಿಶೂರ್​: ಕೇರಳದ ತ್ರಿಶೂರ್ ಜಿಲ್ಲೆಯ ಇಸ್ಲಾಮಿಕ್ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ 11 ಮತ್ತು 12 ನೇ ತರಗತಿಯಲ್ಲಿ ಮೂಲ ಸಂಸ್ಕೃತ ವ್ಯಾಕರಣ, ಭಗವದ್ಗೀತೆ ಮತ್ತು ನಂತರದ ವರ್ಷಗಳಲ್ಲಿ ‘ದೇವ ಭಾಷೆ’ ಯಲ್ಲಿನ ಇತರ ಹಿಂದೂ ಪಠ್ಯಗಳನ್ನು ಒಳಗೊಂಡ ಹೊಸ ಪಠ್ಯಕ್ರಮವು 2023ರಿಂದ ಕಾರ್ಯರೂಪಕ್ಕೆ ಬರಲಿದೆ.

 

ಮಲಿಕ್ ದೀನರ್ ಇಸ್ಲಾಮಿಕ್ ಕಾಂಪ್ಲೆಕ್ಸ್ (ಎಂಐಸಿ) ನಡೆಸುತ್ತಿರುವ ಅಕಾಡೆಮಿ ಆಫ್ ಷರಿಯಾ ಮತ್ತು ಅಡ್ವಾನ್ಸ್‌ಡ್ ಸ್ಟಡೀಸ್ (ಎಎಸ್‌ಎಎಸ್) ಇತ್ತೀಚೆಗೆ ಹಿಂದೂ ವಿದ್ವಾಂಸರ ಸಹಾಯದಿಂದ ತನ್ನ ವಿದ್ಯಾರ್ಥಿಗಳಿಗೆ ‘ದೇವ ಭಾಷಾ’ ಎಂದೂ ಕರೆಯಲ್ಪಡುವ ಸಂಸ್ಕೃತವನ್ನು ಕಲಿಸುವ ಮೂಲಕ ಸುದ್ದಿಯಲ್ಲಿದೆ.

ಪುರಾತನ ಮತ್ತು ಶಾಸ್ತ್ರೀಯ ಭಾಷೆಯನ್ನು ಕಲಿಸಲು ರಚನಾತ್ಮಕ ಪಠ್ಯಕ್ರಮದೊಂದಿಗೆ ಹೊರತರುವ ನಿರ್ಧಾರವನ್ನು ವಿದ್ಯಾರ್ಥಿಗಳು, ಜ್ಞಾನ ಮತ್ತು ಇತರ ಧರ್ಮಗಳ ಬಗ್ಗೆ ಅರಿವು ಮೂಡಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

MIC ASAS ತನ್ನ ವಿದ್ಯಾರ್ಥಿಗಳಿಗೆ ಕಳೆದ ಏಳು ವರ್ಷಗಳಿಂದ ಭಗವದ್ಗೀತೆ, ಉಪನಿಷತ್ತುಗಳು, ಮಹಾಭಾರತ, ರಾಮಾಯಣದ ಆಯ್ದ ಭಾಗಗಳನ್ನು ಸಂಸ್ಕೃತದಲ್ಲಿ ಕಲಿಸುತ್ತಿದೆ. ಹಿಂದಿನ ಸಂಸ್ಕೃತ ಪಠ್ಯಕ್ರಮವು ಹೆಚ್ಚು ವಿವರವಾಗಿಲ್ಲ. ಆದ್ದರಿಂದ ಇನ್ನಷ್ಟು ಪಠ್ಯ ಸೇರಿಸಲಾಗಿದೆ ಎಂದು ಸಂಸ್ಥೆಯ ಸಂಯೋಜಕರಲ್ಲಿ ಒಬ್ಬರಾದ ಹಫೀಜ್ ಅಬೂಬಕರ್ ತಿಳಿಸಿದರು.


Spread the love

By admin