Spread the love

ನ್ಯಾಷನಲ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದ `ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಹೊಂಬಾಳೆ ನಿರ್ಮಾಣದ ಕಾಂತಾರ ಚಿತ್ರ ಆಸ್ಕರ್ ಅಂಗಳದವರೆಗೂ ತಲುಪಿದ್ದು, ಇದೀಗ ಸಿನಿಮಾ ತಂಡ ದೇವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದೆ.

 

ಕಾಂತಾರ’ ಚಿತ್ರದ ಯಶಸ್ಸಿನ ನಂತರ ಇತ್ತೀಚೆಗೆ ಮಂಗಳೂರು ಭಾಗದಲ್ಲಿ ಪಂಜುರ್ಲಿ ಕೋಲ ಕೊಟ್ಟು ಇಡೀ `ಕಾಂತಾರ’ ಚಿತ್ರತಂಡ ಹರಕೆ ತೀರಿಸಿದೆ. ರಿಷಬ್ ಶೆಟ್ಟಿ, ಹೊಂಬಾಳೆ ಸಂಸ್ಥೆಯ ರೂವಾರಿ ವಿಜಯ್ ಕಿರಗಂದೂರು, ಸಪ್ತಮಿ ಸೇರಿದಂತೆ ಹಲವರು ಕೋಲದಲ್ಲಿ ಭಾಗಿಯಾಗಿದ್ದರು.

ದೈವ ಕೋಲದ ಹರಕೆ ಕ್ಷಣ ಹೇಗಿತ್ತು ಎಂಬುದನ್ನ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಹೊಂಬಾಳೆ ಸಂಸ್ಥೆ ಶೇರ್ ಮಾಡಿರುವ ವಿಡಿಯೋಗೆ ವರಾಹ ರೂಪಂ ಹಾಡು ಬಳಸಿ, ಈ ವೀಡಿಯೋವನ್ನ ಅಪ್‌ಲೋಡ್ ಮಾಡಿದ್ದಾರೆ.

ನೀವು ಪ್ರಕೃತಿಗೆ ಶರಣಾಗಿ ಮತ್ತು ಜೀವನದಲ್ಲಿ ಯಶಸ್ಸು ಮತ್ತು ಸ್ವಾತಂತ್ರ್ಯವನ್ನು ನಿಮಗೆ ನೀಡಿದ ದೇವರನ್ನು ಆರಾಧಿಸಿ. ಕಾಂತಾರ ತಂಡವು ದೈವದ ನಿಜ ರೂಪವನ್ನು ವೀಕ್ಷಿಸಿತು, ದೈವದ ಆಶೀರ್ವಾದವನ್ನು ಪಡೆಯಿತು ಎಂದು ಹೊಂಬಾಳೆ ಫಿಲ್ಮ್ಸ್ ಮತ್ತು ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಹರಕೆ ತೀರಿಸಿದ ಕ್ಷಣಗಳು ಎಂದು ಕೂಡ ಬರೆದಿದ್ದಾರೆ.


Spread the love

By admin