ಬೆಂಗಳೂರು: ನಮಗೆ ನಿತ್ಯ ಕಚೇರಿ, ಮನೆಗೆ ಓಡಾಡಲು ಇವರಿಂದ ಸಮಸ್ಯೆ ಆಗ್ತಾ ಇದೆ. ಕೂಡಲೇ ಕ್ರಮ ವಹಿಸಿ ಅಂತ ಟೆಕ್ಕಿಗಳು ದೂರು ನೀಡಿದ್ದಾರೆ. ದೂರು ನೀಡಿದ್ದು ಯಾರ ಮೇಲೆ ಗೊತ್ತಾ..? ಎಮ್ಮೆಗಳ ಮೇಲೆ. ಟ್ರಾಫಿಕ್ ಸಮಸ್ಯೆ ಇವುಗಳಿಂದ ಹೆಚ್ಚಾಗ್ತಾ ಇದೆ ಅಂತ ಟ್ವಿಟರ್ ಮೂಲಕ ಟ್ರಾಫಿಕ್ ಪೊಲೀಸರು ಹಾಗೂ ಬಿಬಿಎಂಪಿ ಗೆ ದೂರು ನೀಡಿದ್ದಾರೆ.
ನಗರದ ಕಸವನಹಳ್ಳಿ ರೋಡ್ನಲ್ಲಿ ಪ್ರತಿನಿತ್ಯ ಎಮ್ಮೆಗಳು ನಿಲ್ತಾ ಇವೆಯಂತೆ. ಇದರಿಂದ ದಿನನಿತ್ಯ 45 ನಿಮಿಷ ಟ್ರಾಫಿಕ್ ಜಾಮ್ ಆಗುತ್ತಿದ್ದು, ಟೆಕ್ಕಿಗಳು ಸುಸ್ತಾಗಿ ಹೋಗಿದ್ದಾರೆ. ಕಳೆದ 6-7 ತಿಂಗಳಿಂದ ಈ ಸಮಸ್ಯೆ ಉಂಟಾಗಿದೆಯಂತೆ. ಇದರಿಂದ ಕಚೇರಿಗೆ ಹೋಗೋದು ಕಷ್ಟ ಆಗ್ತಾ ಇದೆ. ಸೂಕ್ತ ಕ್ರಮ ಕೈಗೊಳ್ಳಿ ಅಂತ ಟೀಟ್ವರ್ನಲ್ಲಿ ಪಶುಸಂಗೋಪನಾ ಇಲಾಖೆ, ಟ್ರಾಫಿಕ್ ಪೋಲಿಸ್, ಬಿಬಿಎಂಪಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
ಇದು ಒಂದು ರಸ್ತೆಯ ಕಥೆಯಲ್ಲ. ನಗರದ ಬಹುತೇಕ ರಸ್ತೆಗಳಲ್ಲಿ ಬೆಳ್ಳಂ ಬೆಳಗ್ಗೆ ಹಸುಗಳು, ಎಮ್ಮೆಗಳು ರಸ್ತೆಗೆ ಬರೋದ್ರಿಂದ ಟ್ರಾಫಿಕ್ ಸಮಸ್ಯೆ ಅನೇಕ ತಿಂಗಳುಗಳಿಂದ ಉಂಟಾಗುತ್ತಲೇ ಇದೆ. ಆದರೂ ಬಿಬಿಎಂಪಿಯಾಗಲೀ ಅಥವಾ ಟ್ರಾಫಿಕ್ ಪೊಲೀಸರಾಗಲೀ ತಲೆ ಕೆಡಿಸಿಕೊಳ್ತಾ ಇಲ್ಲ. ಇದಕ್ಕೆ ಯಾವಾಗ ಮುಕ್ತಿ ಸಿಗುತ್ತೋ ಗೊತ್ತಿಲ್ಲ.