Spread the love

ನವದೆಹಲಿ: ಗಣರಾಜ್ಯೋತ್ಸವದ ವೇಳೆ ದೆಹಲಿಯ ಕರ್ತವ್ಯ ಪಥ್ ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪ್ರದರ್ಶನಗೊಳ್ಳಿದೆ ಕರ್ನಾಟಕ ಟ್ಯಾಬ್ಲೋ. ಈ ವರ್ಷದ ವಿಶೇಷವೇನೆಂದರೆ ತ್ಯಾಗ, ನಿಸ್ವಾರ್ಥ ಸೇವೆಯ ಪ್ರತಿರೂಪ ನಾರಿ ಶಕ್ತಿ ಈ ಬಾರಿಯ ಟ್ಯಾಬ್ಲೋ ಸಿದ್ಧಗೊಂಡಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಸ್ತಬ್ದಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡುವ ಕುರಿತಾಗಿ ವಿವಾದ ಆರಂಭವಾಗಿತ್ತು ಮತ್ತು ಈ ಬಾರಿ ಪ್ರದರ್ಶನಕ್ಕೆ ಅವಕಾಶ ಎಲ್ಲ ಎಂಬ ಸುದ್ದಿಯೂ ಕೇಳಿಬಂದಿತ್ತು . ಆದರೆ ನಂತರದ ಬೆಳವಣಿಗೆಗಳಲ್ಲಿ ರಾಜ್ಯದ ಕೇಂದ್ರ ಸಚಿವರು, ಸಂಸದರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರಂತರ ಒತ್ತಡದ ಫಲದಿಂದ ಸ್ತಬ್ದಚಿತ್ರ ಪ್ರದರ್ಶನಕ್ಕೆ ಒಪ್ಪಿಗೆ ದೊರೆತಿತ್ತು. ಈಗ ಸ್ತಬ್ದಚಿತ್ರವೂ ಸಿದ್ಧಗೊಂಡಿದ್ದು, ಅದರ ಅಪರೂಪದ ದೃಶ್ಯಗಳನ್ನು ನಾವು ಇಲ್ಲಿ ಕಣ್ತುಂಬಿಕೊಳ್ಳಬಹುದು. ಗಣರಾಜ್ಯೋತ್ಸವದಲ್ಲಿ ವೇಳೆ ದೆಹಲಿಯ ಕರ್ತವ್ಯ ಪಥ್ ನಲ್ಲಿ ಅಂತು ಪ್ರದರ್ಶನಗೊಳ್ಳಿದೆ ಕರ್ನಾಟಕ ಟ್ಯಾಬ್ಲೋ. ಈ ಸ್ತಬ್ದ ಚಿತ್ರದ ರಥವು ತ್ಯಾಗ, ನಿಸ್ವಾರ್ಥ ಸೇವೆಯ ಪ್ರತಿರೂಪ ನಾರಿ ಶಕ್ತಿಯ ಟ್ಯಾಬ್ಲೋ ಸಿದ್ಧಗೊಂಡಿದೆ. ಪದ್ಮ ಪ್ರಶಸ್ತಿ ಪುರಸ್ಕೃತ ವೃಕ್ಷ ಮಾತೆಯರಾದ ಸಾಲುಮರದ ತಿಮ್ಮಕ್ಕ. ತುಳಸೀಗೌಡ ಹಾಲಕ್ಕಿ ಹಾಗೂ ಸಾವಿರಾರು ಹೆರಿಗೆಗಳನ್ನು ಮಾಡಿದ ಸೂಲಗಿತ್ತಿ ನರಸಮ್ಮ ಅವರ ಸ್ತಬ್ಧಚಿತ್ರ ಪ್ರದರ್ಶನ ಆಗುತ್ತಿದೆ. ಈ ಹಿರಿಯ ಸಾಧಕ ಮಹಿಳೆಯರು ನಮ್ಮ ನಾಡಿನ ಹೆಮ್ಮೆಯ ಪ್ರತೀಕವೂ ಆಗಿದ್ದು, ಅವರು ಈ ನಾಡಿಗಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಗೌರವಿಸುವ ಅಭೂತಪೂರ್ವ ಕ್ಷಣವಾಗಲಿದೆ ಇದು.

ಅಜಿತ್ ಕುಮಾರ್ ಬೆಳ್ಳಿಬಟ್ಲು ಓ


Spread the love

By admin