Spread the love

ಹೈದರಾಬಾದ್: ಹೈದರಾಬಾದ್ ನುಮಾಯಿಶ್ ಎಕ್ಸಿಬಿಷನ್‌ ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ಕಾರ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ಮೂರು ಕಾರ್ ಗಳು ಸುಟ್ಟು ಭಸ್ಮವಾಗಿವೆ.

ಎಲೆಕ್ಟ್ರಿಕ್ ಕಾರ್ ನಿಂದ ಉಂಟಾದ ಬೆಂಕಿ ಪಾರ್ಕಿಂಗ್ ಸ್ಥಳದಲ್ಲಿ ಇತರ ಐದು ವಾಹನಗಳಿಗೆ ವ್ಯಾಪಿಸಿತು, ಇದರಲ್ಲಿ ಮೂರು ಕಾರುಗಳು ಸುಟ್ಟು ಭಸ್ಮವಾಗಿದ್ದು, ಎರಡು ಕಾರುಗಳು ಭಾಗಶಃ ಹಾನಿಗೊಳಗಾಗಿವೆ.

ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಎಂದು ಇನ್ಸ್‌ ಪೆಕ್ಟರ್ ಬಿ. ಪ್ರಸಾದ ರಾವ್ ಮಾಹಿತಿ ನೀಡಿದ್ದಾರೆ.


Spread the love

By admin