ಅಸ್ಸಾಂ: ಸಾಮಾನ್ಯವಾಗಿ ಒಂದೇ ಬಾರಿಗೆ ನಾಲ್ಕೈದು ಮಕ್ಕಳು ಹುಟ್ಟೋ ಸುದ್ದಿಯನ್ನ ಕೇಳ್ತಾ ಇದ್ವಿ. ಅದಕ್ಕೂ ಮೀರಿ ನಾಲ್ಕು ಕೈ, ನಾಲ್ಕು ಕಾಲು ಹೀಗೆ ವಿಚಿತ್ರ ಮಕ್ಕಳು ಹುಟ್ಟಿದನ್ನ ಕೇಳ್ತಾ ಇದ್ವಿ. ಆದರೆ ಇಲ್ಲೊಂದು ಕಡೆ ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದೆ.
ನಿಜಕ್ಕೂ ಇದು ಆಶ್ಚರ್ಯದ ಜೊತೆಗೆ ವಿಚಿತ್ರವಾಗಿದೆ ಅಂತ ಅನ್ನಿಸಿದರೂ ಇದು ಸತ್ಯ.
ಹೌದು, ದಿಬ್ರುಗಡ್ ಜಿಲ್ಲೆಯಲ್ಲಿ 11 ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಕಂಡುಬಂದಿದೆ. ಇದೊಂದು ವಿಚಿತ್ರ ಪ್ರಕರಣವಾಗಿದೆ. ಇಲ್ಲಿನ ಅಪೇಕ್ಷಾ ಆಸ್ಪತ್ರೆಯಲ್ಲಿ ಈ ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ವೈದ್ಯರು 2 ಕೆಜಿ ತೂಕದ ಭ್ರೂಣವನ್ನು ಹೊರ ತೆಗೆದಿದ್ದಾರೆ. ಸದ್ಯ ಮಗು ಆರೋಗ್ಯವಾಗಿದೆ. ಅರುಣಾಚಲ ಪ್ರದೇಶದ ಸಾಂಗ್ಲಾಂಗ್ ಜಿಲ್ಲೆಯ ಮಗು ಇದು ಎಂದು ಹೇಳಲಾಗಿದೆ. ಇದೊಂದು ಅಪರೂಪದಲ್ಲಿ ಅಪರೂಪ ಪ್ರಕರಣ ಅಂತೆ.
ಐದು ಲಕ್ಷ ಮಕ್ಕಳ ಪೈಕಿ ಒಂದೊಂದು ಮಗುವಿಗೆ ಈ ರೀತಿ ಆಗಲಿದೆಯಂತೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಫೀಟಸ್-ಇನ್-ಫೀಟು ಎಂದು ಕರೆಯುತ್ತಾರೆ. ಇದರಲ್ಲಿ ಒಂದು ದೋಷಪೂರಿತ ಕಶೇರುಕ ಭ್ರೂಣವು ಅದರ ಅವಳಿ ದೇಹದೊಳಗೆ ಸುತ್ತುವರಿಯಲ್ಪಟ್ಟಿರುತ್ತದೆಯಂತೆ.
ಅನಾರೋಗ್ಯ ಎಂಬ ಕಾರಣಕ್ಕೆ ಮಗುವಿನ ಪೋಷಕರು ಆಸ್ಪತ್ರೆಗೆ ಕರೆ ತಂದಿದ್ದರು. ಮಗುವನ್ನು ಪರೀಕ್ಷೆ ಮಾಡಿದ್ದಾರೆ ವೈದ್ಯರು. ಪರೀಕ್ಷೆ ಮಾಡಿದ ವೈದ್ಯರಿಗೆ ನಿಜವಾಗಿಯೂ ಆಶ್ಚರ್ಯ ಕಾದಿತ್ತು.ಹೊಟ್ಟೆಯಲ್ಲಿ ಭ್ರೂಣ ಇರುವುದು ಗೊತ್ತಾಗಿದೆ. ನಂತರ ವೈದ್ಯರ ತಂಡ ಶನಿವಾರ 3 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣವನ್ನು ಹೊರತೆಗೆದಿದ್ದಾರೆ. ಇದೊಂದೆ ಅಲ್ಲ ಈ ಪ್ರಕರಣಕ್ಕೂ ಮುನ್ನ ಇಂಥದ್ದೇ ಮತ್ತೊಂದು ಪ್ರಕರಣವನ್ನು ಇದೇ ಆಸ್ಪತ್ರೆ ವೈದ್ಯರು ಬಗೆಹರಿಸಿದ್ದಾರಂತೆ.