Spread the love

ಕರ್ನಾಟಕದ ಶಾಲೆಗಳಲ್ಲಿ ರಾಜ್ಯ ಸರ್ಕಾರ ಹಿಜಾಬ್ ನಿರ್ಬಂಧಿಸಿದ ಆದೇಶದ ವಿಚಾರಣೆಗೆ ಸುಪ್ರೀಂ ಕೋರ್ಟ್ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ತ್ರಿಸದಸ್ಯ ಪೀಠ ರಚನೆ ಮಾಡಲು ಮುಂದಾಗಿದೆ.

ಶಾಲೆಗಳಲ್ಲಿ ಹಿಜಾಬ್ ನಿಷೇಧಿಸಿ ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಮಾನ್ಯ ಮಾಡಿದ್ದು, ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು.

ಹೀಗಾಗಿ ಇದರ ವಿಚಾರಣೆ ದ್ವಿ ಸದಸ್ಯ ಪೀಠದಲ್ಲಿ ನಡೆದಿತ್ತು.

ಆದರೆ ಭಿನ್ನ ತೀರ್ಪು ಹೊರ ಬಿದ್ದ ಬಳಿಕ ಈ ಮೊದಲು ಕರ್ನಾಟಕ ಹೈಕೋರ್ಟ್, ಸರ್ಕಾರದ ತೀರ್ಮಾನವನ್ನು ಮಾನ್ಯ ಮಾಡಿ ನೀಡಿದ್ದ ತೀರ್ಪನ್ನೇ ಮುಂದುವರಿಸಲಾಗಿತ್ತು. ಇದೀಗ ಇದರ ವಿಚಾರಣೆಗಾಗಿ ಸುಪ್ರೀಂ ಕೋರ್ಟಿನ ತ್ರಿ ಸದಸ್ಯ ಪೀಠ ರಚನೆಯಾಗಿದೆ.


Spread the love

By admin