Spread the love

ಯೋವಾ: ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣಗಳು ಮುಂದುವರೆದಿವೆ. ಕ್ಯಾಲಿಫೋರ್ನಿಯಾ ಶೂಟೌಟ್ ಬೆನ್ನಲ್ಲೇ ಮತ್ತೊಂದು ಘಟನೆ ಮರುಕಳಿಸಿದೆ.

ಅಯೋವಾದ ಡೆಸ್ ಮೊಯಿನ್ಸ್‌ ನಲ್ಲಿರುವ ಯುವ ಕೇಂದ್ರದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂರನೇ ವ್ಯಕ್ತಿ ಶಿಕ್ಷಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಅಪಾಯದಲ್ಲಿರುವ ಯುವಕರಿಗಾಗಿ ಕಾರ್ಯಕ್ರಮವನ್ನು ನಡೆಸುತ್ತಿರುವ ಸ್ಟಾರ್ಟ್ಸ್ ರೈಟ್ ಹಿಯರ್‌ನಲ್ಲಿ ಗುಂಡಿನ ದಾಳಿಯಲ್ಲಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರು ಸಾವನ್ನಪ್ಪಿದ್ದಾರೆ. ಶಾಲೆಯ ಉದ್ಯೋಗಿಯಾಗಿರುವ ಮೂರನೇ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಡೆಸ್ ಮೊಯಿನ್ಸ್ ಪೊಲೀಸ್ ಇಲಾಖೆಯ ವಕ್ತಾರ ಪಾಲ್ ಪ್ಯಾರಿಜೆಕ್ ಹೇಳಿದ್ದಾರೆ.

ಸಾಕ್ಷಿಗಳ ಸುಳಿವುಗಳ ಮೇರೆಗೆ ಪೊಲೀಸರು ನಂತರ ಕಾರ್ ತಡೆದು ನಿಲ್ಲಿಸಿದ್ದಾರೆ. ಶೂಟಿಂಗ್‌ ಮಾಡಿದ ಮೂವರು ಸಂಭಾವ್ಯ ಶಂಕಿತರನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಲಾಗಿದೆ.

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಶನಿವಾರ ರಾತ್ರಿ ನಡೆದ ಹತ್ಯಾಕಾಂಡದ ನಂತರ ಈ ಗುಂಡಿನ ದಾಳಿ ನಡೆದಿದೆ,


Spread the love