Spread the love

ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕಚೇರಿಯಲ್ಲಿ ಕೊಲೆ ಯತ್ನ ನಡೆದಿದೆ. ಚನ್ನರಾಜು ಎಂಬುವರ ಮೇಲೆ ಕುಡುಗೋಲಿನಿಂದ ಹೊಡೆದು ಕೊಲೆಗೆ ಯತ್ನಿಸಲಾಗಿದೆ. ಜಮೀನು ವ್ಯಾಜ್ಯ ಸೋತ ಹಿನ್ನಲೆಯಲ್ಲಿ ಆರೋಪಿ ನಂದನ್ ಕೃತ್ಯವೆಸಗಿದ್ದಾನೆ.

ಇಬ್ಬರೂ ಸಂಬಂಧಿಕರಾಗಿದ್ದಾರೆ. ಹಲ್ಲೆಗೊಳಗಾದ ಚನ್ನರಾಜು ಬಳಿ 40 ಎಕರೆ ಜಮೀನು ಇತ್ತು. ಹಲ್ಲೆ ಮಾಡಿದ ನಂದನ್ ಬಳಿ 3.5 ಎಕರೆ ಜಮೀನು ಇತ್ತು. 3.2 ಎಕರೆ ಜಮೀನು ನನಗೆ ಸಿಗಬೇಕೆಂದು ಚನ್ನರಾಜು ಕೇಸು ಹಾಕಿದ್ದ.

ನಂದನ್ ವಿರುದ್ಧ ನ್ಯಾಯಾಲಯದಲ್ಲಿ ಚನ್ನರಾಜ ಕೇಸು ದಾಖಲಿಸಿದ್ದ. ನಾಲ್ಕು ವರ್ಷದಿಂದ ತಹಶೀಲ್ದಾರ್ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿತ್ತು. ಇಂದು ಚನ್ನರಾಜು ಪರವಾಗಿ ತಹಶೀಲ್ದಾರ್ ಕೋರ್ಟ್ ತೀರ್ಪು ನೀಡಿದೆ. ತೀರ್ಪು ಬರುತ್ತಿದ್ದಂತೆ ಚನ್ನರಾಜು ಮೇಲೆ ನಂದನ್ ಹಲ್ಲೆ ಮಾಡಿದ್ದಾನೆ.

ಎರಡು ಪ್ಯಾಕೆಟ್ ಖಾರದಪುಡಿ ತಂದು ಮುಖಕ್ಕೆ ಎರಚಿ ಕುಡುಗೋಲಿನಿಂದ ಹತ್ತಾರು ಬಾರಿ ಹೊಡೆದು ಹತ್ಯೆಗೆ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಚನ್ನರಾಜುನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ಚನ್ನರಾಜು ಮತ್ತು ನಂದನ್ ನಿವಾಸದ ಬಳಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.


Spread the love

By admin