Spread the love

ಹಾಸನ: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಜೆಡಿಎಸ್ ಕಾರ್ಯಕರ್ತರೊಬ್ಬರಿಗೆ ಹಣ ನೀಡಿದ ವಿಚಾರ ಹಾಗೂ ಕಾರ್ಯಕರ್ತನೊಂದಿಗಿನ ಸಂಭಾಷಣೆಯ ಆಡಿಯೋ ಇತ್ತೀಚೆಗೆ ಬಹಿರಂಗವಾಗಿತ್ತು. ಜೆಡಿಎಸ್ ಕಾರ್ಯಕರ್ತನಿಗೆ 50,000 ರೂಪಾಯಿ ಕೊಟ್ಟಿದ್ದಾರೆ ಎನ್ನಲಾಗಿತ್ತು.

ಇದೀಗ ಈ ಆಡಿಯೋ ಪ್ರಕರಣದ ಬಗ್ಗೆ ಖುದ್ದು ಶಿವಲಿಂಗೇಗೌಡರು ಸ್ಪಷ್ಟನೆ ನಿಡಿದ್ದಾರೆ.

ಜೆಡಿಎಸ್ ಕಾರ್ಯಕರ್ತ ತಮ್ಮ ತೋಟದಲ್ಲಿ ಮೂರು ದಿನ ಕೂತು ತುಂಬಾ ಕಷ್ಟದಲ್ಲಿದ್ದೇನೆ ಎಂದು ಅಲವತ್ತುಕೊಂಡ. ಅದೇ ಕಾರಣಕ್ಕಾಗಿ ಅವನಿಗೆ 50 ಸಾವಿರ ರೂಪಾಯಿ ಹಣ ನೀಡಿದ್ದೆ ಎಂದು ಶಾಸಕರು ಸ್ಪಷ್ಟ ಪಡಿಸಿದ್ದಾರೆ.

ಅರಸಿಕೆರೆ ತಾಲೂಕಿನ ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿನ ಲಾಳನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಬಳಿಕ ಶಾಸಕರ ಆಡಿಯೋ ಭಾರಿ ವೈರಲ್ ಆಗಿತ್ತು.


Spread the love

By admin