Spread the love

ಬೆಂಗಳೂರು: ಅಪ್ರಾಪ್ತೆ ಎಂಬ ಒಂದೇ ಕಾರಣಕ್ಕೆ ಮದುವೆ ಅನೂರ್ಜಿತವಾಗುವುದಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ವದ ಆದೇಶ ನೀಡಲಾಗಿದೆ.

ಪತಿ ತನ್ನ ಪತ್ನಿಯೊಂದಿಗಿನ ವಿವಾಹ ಅನೂರ್ಜಿತಗೊಳಿಸಲು ಅರ್ಜಿ ಸಲ್ಲಿಸಿದ್ದು, ವಿವಾಹವಾದಾಗ ಪತ್ನಿಯ ವಯಸ್ಸು 16 ವರ್ಷ 11 ತಿಂಗಳಾಗಿತ್ತು.

ಹಿಂದೂ ವಿವಾಹ ಕಾಯ್ದೆಯಡಿ ಯುವತಿಗೆ 18 ವರ್ಷ, ಯುವಕನಿಗೆ 21 ವರ್ಷ ವಯಸ್ಸಾಗಿರಬೇಕು. ಹೀಗಾಗಿ ಪತ್ನಿಯೊಂದಿಗಿನ ವಿವಾಹ ರದ್ದತಿಗೆ ಪತಿ ಮನವಿ ಮಾಡಿದ್ದು, ಕೌಟುಂಬಿಕ ನ್ಯಾಯಾಲಯ ವಿವಾಹವನ್ನು ಅನುರ್ಜಿತಗೊಳಿಸಿತ್ತು.

ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಹಿಂದೂ ವಿವಾಹ ಕಾಯ್ದೆಯ ಸೆ. 11 ರ ಅಡಿ ಅನೂರ್ಜಿತವಾಗುವುದಿಲ್ಲ. ವಿವಾಹವನ್ನು ಸೆ. 11 ರ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಹೀಗಾಗಿ ವಿವಾಹ ಅನೂರ್ಜಿತವಲ್ಲವೆಂದು ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠದಿಂದ ತೀರ್ಪು ನೀಡಲಾಗಿದೆ.


Spread the love

By admin