Spread the love

ಕೊರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು ಈಗಾಗ್ಲೇ ಮೂರು ಲಸಿಕೆಗಳನ್ನು ಪಡೆದಿದ್ದರೆ, ಅಂಥವರಿಗೆ ನಾಲ್ಕನೇ ಲಸಿಕೆಯ ಅಗತ್ಯವಿಲ್ಲ. ಹೀಗಂತ ಐಸಿಎಂಆರ್‌ನ ತಜ್ಞರು ಮಾಹಿತಿ ನೀಡಿದ್ದಾರೆ.

ಕೋವಿಡ್-19 ಮತ್ತು ಅದರ ರೂಪಾಂತರಗಳ ಬಗ್ಗೆ ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧ್ಯಯನ ನಡೆಸಿದ್ದು, ಈ ತೀರ್ಮಾನಕ್ಕೆ ಬಂದಿದೆ.

ಕರೋನಾ ವಿರುದ್ಧ ಹೋರಾಡಲು ನಾಲ್ಕನೇ ಡೋಸ್ ಲಸಿಕೆ ಅಗತ್ಯವಿಲ್ಲ ಎಂದು ಐಸಿಎಂಆರ್‌ ಸ್ಪಷ್ಟಪಡಿಸಿದೆ.

ವ್ಯಕ್ತಿಯು ಮೂರು ಡೋಸ್ ಲಸಿಕೆಯನ್ನು ತೆಗೆದುಕೊಂಡಿದ್ದರೆ ಚಿಂತಿಸಬೇಕಾಗಿಲ್ಲ. ಏಕೆಂದರೆ ಮೂರು ಲಸಿಕೆಗಳನ್ನು ಪಡೆದರೆ ವೈರಸ್ ವಿರುದ್ಧ ಹೋರಾಡಲು ವ್ಯಕ್ತಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದಾನೆ ಎಂದರ್ಥ. ಹೊಸ ಲಸಿಕೆಯ ಅಗತ್ಯವಿರುವಷ್ಟು ಕೊರೊನಾ ವೈರಸ್ ಬದಲಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಕರೋನ ವೈರಸ್‌ನ ಎಲ್ಲಾ ರೂಪಾಂತರಗಳು ಬರುತ್ತಿದ್ದರೂ, ಹೊಸ ಲಸಿಕೆ ಅಗತ್ಯವಿರುವಷ್ಟು ಬದಲಾಗಿಲ್ಲ, ಆದ್ದರಿಂದ ಜನರು ‘ಟಿ-ಸೆಲ್’ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಅವಲಂಬಿಸಬೇಕು. ಸದ್ಯ ಅವರು ವೈರಸ್‌ನ ರೂಪಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ಪುರಾವೆಗಳನ್ನು ನೋಡಿದಾಗ, ಕೊರೋನಾಗೆ ನಾಲ್ಕನೇ ಲಸಿಕೆ ಅಗತ್ಯವಿರುವಷ್ಟು ಗಂಭೀರವಾಗಿಲ್ಲ ಎಂದು ತಿಳಿದು ಬಂದಿದೆ.


Spread the love

By admin