Spread the love

ಬೆಂಗಳೂರು: ಆಪಾದಿತ ಲೈಂಗಿಕ ಕಳ್ಳಸಾಗಾಣಿಕೆದಾರ ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಸುಳ್ಳು ದೂರು ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಸ್ಯಾಂಟ್ರೋ ರವಿ ಪತ್ನಿ ವಿಚಾರಣೆ ನಡೆಸಲಾಗಿದೆ. ಎಸಿಪಿ ಧರ್ಮೇಂದ್ರ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ.

 

ಕಾಟನ್ ಪೇಟೆ ಕೇಸ್ ಸಂಬಂಧ ಎಲ್ಲಾ ದಾಖಲೆ ನೀಡಿದ್ದೇನೆ. ಮತ್ತೆ ವಿಚಾರಣೆಗೆ ಬರಬೇಕೆಂದು ಸಿಸಿಬಿ ಪೊಲೀಸರು ಹೇಳಿಲ್ಲ. ಸಿಸಿಬಿ ಮತ್ತು ಸಿಐಡಿ ಪೊಲೀಸರಿಗೆ ಎಲ್ಲ ದಾಖಲೆ ನೀಡಿದ್ದೇನೆ. ಮೊದಲು ಪೊಲೀಸರ ಮೇಲೆ ನನಗೆ ನಂಬಿಕೆ ಇರಲಿಲ್ಲ. ಹೀಗಾಗಿ ನಾನು ಮೈಸೂರಿನಲ್ಲಿ ಯಾವುದೇ ದಾಖಲೆ ನೀಡಿರಲಿಲ್ಲ. ಸಿಐಡಿಗೆ ಕೇಸ್ ವರ್ಗಾವಣೆಯಾದ ಬಳಿಕ ದಾಖಲೆ ನೀಡಿದ್ದೇನೆ ಎಂದು ಬೆಂಗಳೂರಿನ ಸಿಸಿಬಿ ಕಚೇರಿ ಬಳಿ ಸ್ಯಾಂಟ್ರೋ ರವಿ ಪತ್ನಿ ಹೇಳಿಕೆ ನೀಡಿದ್ದಾರೆ.

ಸ್ಯಾಂಟ್ರೋ ರವಿಯ ವಿಗ್ ವಿಚಾರ ನನಗೇನೂ ಗೊತ್ತಿರಲಿಲ್ಲ. ಇಷ್ಟು ವರ್ಷ ಸಂಸಾರ ಮಾಡಿದ್ರೂ ನನಗೆ ಅನುಮಾನ ಇರಲಿಲ್ಲ. ಸ್ಯಾಂಟ್ರೋ ರವಿಯ ಒಂದೊಂದೇ ವಿಚಾರ ಬೆಳಕಿಗೆ ಬರುತ್ತಿವೆ ಎಂದು ಹೇಳಿದ್ದಾರೆ.


Spread the love

By admin