Spread the love

ಬಾಗಲಕೋಟೆ: ಹಾಸನ ಜೆಡಿಎಸ್ ಟಿಕೆಟ್ ಗಾಗಿ ಭವಾನಿ ರೇವಣ್ಣ ಫೈಟ್ ವಿಚಾರ ಬೆನ್ನಲ್ಲೇ ಬಿಜೆಪಿ ನಾಯಕರು ಭವಾನಿ ರೇವಣ್ಣ ಅವರಿಗೆ ಬಿಜೆಪಿಗೆ ಆಹ್ವಾನ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಚಿವ ಅಶ್ವತ್ಥನಾರಾಯಣ ಬಳಿಕ ಇದೀಗ ಸಚಿವ ಗೋವಿಂದ ಕಾರಜೋಳ ಕೂಡ ಭವಾನಿ ರೇವಣ್ಣ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ.

 

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕಾರಜೋಳ, ಭವಾನಿ ರೇವಣ್ಣ ಬಿಜೆಪಿಗೆ ಬಂದರೆ ಸ್ವಾಗತ. ಬಿಜೆಪಿ ನಿಂತ ನೀರಲ್ಲ, ಹರಿಯುವ ನದಿಯಿದ್ದಂತೆ. ಹರಿಯುವ ನದಿಗೆ ಹೊಸ ನೀರು ಬಂದರೆ ಸ್ವಾಗತ ಎಂದು ಹೇಳಿದರು.

ಹಾಸನ ಜೆಡಿಎಸ್ ಟಿಕೆಟ್ ಗಾಗಿ ಪಕ್ಷದ ಕಾರ್ಯಕರ್ತರು ಹಾಗೂ ದೇವೇಗೌಡರ ಕುಟುಂಬದಲ್ಲಿಯೇ ಪೈಪೋಟಿ ಆರಂಭವಾಗಿರುವ ಬೆನ್ನಲ್ಲೇ ಬಿಜೆಪಿ ನಾಯಕರು ಭವಾನಿ ರೇವಣ್ಣ ಅವರಿಗೆ ಪರೋಕ್ಷವಾಗಿ ಬಿಜೆಪಿಗೆ ಆಹ್ವಾನ ನೀಡುತ್ತಿದ್ದಾರೆ.


Spread the love

By admin