Spread the love

ಕಾರವಾರ: ಕಾಡು ಹಂದಿ ಮಾಂಸ ಎಂದು ನಂಬಿಸಿ ನಾಯಿ ಮಾಂಸ ಮಾರಾಟ ಮಾಡಲಾಗಿದ್ದು, ಮೊಗಟಾ ಮತ್ತು ಸುತ್ತಲಿನ ಭಾಗದಲ್ಲಿ ಸಾರ್ವಜನಿಕರಿಂದ ಗೂಸಾ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಮೊಗಟಾ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಗ್ರಾಮೀಣ ಭಾಗದ ಮಾಂಸಪ್ರಿಯರನ್ನು ಟಾರ್ಗೆಟ್ ಮಾಡಿ ಮಾಂಸ ಮಾರಾಟ ಮಾಡಲಾಗುತ್ತಿತ್ತು.

ಹತ್ತಾರು ಮನೆಗಳಿಗೆ ನಾಯಿ ಮಾಂಸ ಮಾರಾಟ ಮಾಡಿದ ಆರೋಪ ಕೇಳಿ ಬಂದಿದೆ.

ಕಾಡು ಹಂದಿ ಮಾಂಸ ಎಂದು ನಂಬಿಸಿ ಕೆಲ ಯುವಕರು ನಾಯಿ ಮಾಂಸ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ. ಮೋಸದ ಬಗ್ಗೆ ಗೊತ್ತಾದ ನಂತರ ಮಾಂಸ ಮಾರಾಟ ಮಾಡಿದ್ದ ಯುವಕರನ್ನು ಹಿಗ್ಗಾಮುಗ್ಗ ಥಳಿಸಲಾಗಿದೆ. ಮಾಂಸ ಖರೀದಿಸುವ ನೆಪದಲ್ಲಿ ಯುವಕರನ್ನು ಕರೆಸಿಕೊಂಡು ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ


Spread the love

By admin