Spread the love

ತುಮಕೂರು: ಭೀಕರ ಅಪಘಾತದಲ್ಲಿ ಪುಟ್ಟ ಕಂದಮ್ಮ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಕೈಮರಾದಲ್ಲಿ ನಡೆದಿದೆ.

ಬುಲೆರೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ತಂದೆ-ತಾಯಿ ಹಾಗೂ ಮಗು ಗಂಭೀರವಾಗಿ ಗಾಯಗೊಂಡಿದ್ದಾರೆ.

ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸುತ್ತಿದ್ದ ವೇಳೆ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ವಿಳಂಬವಾಗಿದೆ. ಆಸ್ಪತ್ರೆ ತಲುಪುವ ಮೊದಲೇ ಗಾಯಾಳು ಕಂದಮ್ಮ ನರಳಿ ನರಳಿ ಮಾರ್ಗ ಮಧ್ಯೆಯೇ ಪ್ರಾಣ ಬಿಟ್ಟಿದೆ ಎಂದು ತಿಳಿದುಬಂದಿದೆ.

ಮಗುವಿನ ತಂದೆ ಅಹಮದ್ ಹಾಗೂ ತಾಯಿ ರುಕ್ಸಾನಾ ಸ್ಥಿತಿಯೂ ಗಂಭೀರವಾಗಿದ್ದು, ದಂಪೈಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love

By admin