Spread the love

ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಗರ್ಭಪಾತ ಮಾಡಿಸಿಕೊಳ್ಳಲು ತನಗೆ ಅನುಮತಿ ನೀಡಬೇಕೆಂದು ಕೋರಿ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ತೀರ್ಪು ಪ್ರಕಟವಾಗಿದೆ.

ಪ್ರಕರಣದ ವಿವರ: 20 ವರ್ಷದ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದು ತನಗೆ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡುವಂತೆ ಕೋರಿದ್ದಳು.

ಆದರೆ ಈಗಾಗಲೇ 29 ವಾರಗಳು ತುಂಬಿರುವ ಕಾರಣ ತಾಯಿ ಮತ್ತು ಭ್ರೂಣದ ಹಿತದೃಷ್ಟಿಯಿಂದ ಗರ್ಭಪಾತಕ್ಕೆ ನಿರಾಕರಿಸಲಾಗಿದೆ.

ಆದರೆ ಮಗು ಹೆತ್ತ ಬಳಿಕ ದತ್ತು ನೀಡಬಹುದು ಎಂದು ನ್ಯಾಯಪೀಠ ತಿಳಿಸಿದ್ದು, ಸಂತ್ರಸ್ತೆ ವಿದ್ಯಾರ್ಥಿನಿಯಿಂದ ಯಾವುದೇ ಶುಲ್ಕ ಪಡೆಯದೆ ಎಲ್ಲ ಅಗತ್ಯ ಸೌಲಭ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಹಾಗೂ ಆಕೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕರಿಗೆ ಸೂಚಿಸಿದೆ.


Spread the love

By admin