Spread the love

 ಹಿಂದೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ರೀತಿಯಲ್ಲಿ ಸದ್ದು ಮಾಡಿದ್ದ ಕಾಸ್ಟಿಂಗ್ ಕೌಚ್ ಪ್ರಕರಣಗಳು ಈಗಲೂ ಬೆಳಕಿಗೆ ಬರುತ್ತಲೇ ಇವೆ. ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಈ ಕುರಿತ ಶಾಕಿಂಗ್ ಸಂಗತಿಯಯೊಂದನ್ನು ಬಿಚ್ಚಿಟ್ಟಿದ್ದಾರೆ.

 

ಈ ಹಿಂದೆ ತಮಗೂ ಕೂಡ ಸೆಕ್ಸ್ ಗೆ ಬೇಡಿಕೆ ಬಂದಿತ್ತು. ಚಿತ್ರ ಒಂದರಲ್ಲಿ ಪ್ರಮುಖ ಪಾತ್ರ ನೀಡಿ ಅದಕ್ಕೆ ಬದಲಾಗಿ ಲೈಂಗಿಕವಾಗಿ ಸಹಕರಿಸುವಂತೆ ಕೇಳಲಾಗಿತ್ತು ಎಂದು ಇದೇ ಮೊದಲ ಬಾರಿಗೆ ಚಿತ್ರರಂಗದಲ್ಲಿ ತಮಗಾದ ಅನುಭವವನ್ನು ತಿಳಿಸಿದ್ದಾರೆ.

ಆದರೆ ನನಗೆ ನನ್ನ ನಟನೆಯ ಮೇಲೆ ನಂಬಿಕೆ ಇದ್ದ ಕಾರಣ ಈ ಕೋರಿಕೆಯನ್ನು ನಿರಾಕರಿಸಿದ್ದೆ ಎಂದು ನಯನತಾರ ತಿಳಿಸಿದ್ದು, ಕೆಲವೊಬ್ಬರು ಇಂತಹ ಬೇಡಿಕೆಗಳನ್ನು ಇಡುತ್ತಾರೆ. ಆದರೆ ಅದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.


Spread the love

By admin