Spread the love

ಬ್ಬು ಸಾಗಿಸುತ್ತಿದ್ದ ಗಾಡಿಯಲ್ಲಿ ಕಬ್ಬಿನ ಮೇಲೆ ಕುಳಿತಿದ್ದ ಬಾಲಕನೊಬ್ಬ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ದಾವಣಗೆರೆ ಸಮೀಪದ ಕುಕ್ಕುವಾಡದ ಬಳಿ ಸಂಭವಿಸಿದೆ.

6 ವರ್ಷದ ಪ್ರತಾಪ್ ಮೃತಪಟ್ಟ ಬಾಲಕನಾಗಿದ್ದು, ಈತ ತನ್ನ ತಂದೆ, ಸಮೀಪದ ಗದ್ದೆಯೊಂದರಿಂದ ಕಡಿದ ಕಬ್ಬನ್ನು ಗಾಡಿಯಲ್ಲಿ ತರುವ ವೇಳೆ ತಾಯಿ ಜೊತೆ ಗಾಡಿಯನ್ನು ಏರಿದ್ದ.

 

ಈ ವೇಳೆ ಈತನ ತಂದೆ ಪತ್ತಿನಾಯ್ಕ ಹಗ್ಗವನ್ನು ಜೋರಾಗಿ ಎಳೆದ ವೇಳೆ ಎತ್ತುಗಳು ಏಕಾಏಕಿ ನುಗ್ಗಿದ್ದರಿಂದ ಬಾಲಕ ಆಯತಪ್ಪಿ ಕೆಳಗೆ ಬಿದ್ದಿದ್ದ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಇದೀಗ ಬಾಲಕನ ತಾಯಿ ಲಕ್ಷ್ಮಿ ಬಾಯಿ, ತಮ್ಮ ಮಗನ ಸಾವಿಗೆ ಪತಿಯ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


Spread the love

By admin