Spread the love

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಕೆಸರೆರಚಾಟ ಜೋರಾಗಿದೆ. ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಜನಸ್ಪಂದನೆ ಕಂಡು ಬಿಜೆಪಿ ನಾಯಕರಿಗೆ ಭಯ ಶುವಾಗಿದೆ. ಹಾಗಾಗಿ ನಮ್ಮ ಪಕ್ಷದ ಬಗ್ಗೆ, ಕುಟುಂಬದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.

ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಪಂಚರತ್ನ ರಥಯಾತ್ರೆಗೆ ನವಗ್ರಹ ಯಾತ್ರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಜೋಶಿಯವರು ಕರ್ನಾಟಕದ ಬ್ರಾಹ್ಮಣರಲ್ಲ, ಮಹಾರಾಷ್ಟ್ರದ ಪೇಶ್ವೆಗಳ ವಂಶಸ್ಥರು. ಅವರನ್ನು ಮುಂದಿನ ಸಿಎಂ ಮಾಡಲು ಆರ್ ಎಸ್ ಎಸ್ ಹುನ್ನಾರ ನಡೆಸಿದೆ. ರಾಜ್ಯದ ಜನತೆ ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದಾರೆ.

ಆರ್ ಎಸ್ ಎಸ್ ನವರು ಪ್ರಹ್ಲಾದ್ ಜೋಶಿ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಲು ಹುನ್ನಾರ ನಡೆಸಿದ್ದಾರೆ. ಜೋಶಿ ನಮ್ಮ ದಕ್ಷಿಣ ಕರ್ನಾಟಕ ಸಂಸ್ಕೃತಿಯ ಬ್ರಾಹ್ಮಣರಲ್ಲ, ಬ್ರಾಹ್ಮಣ ವೃತ್ತಿ ಸಂಸ್ಕಾರದಲ್ಲಿ 2-3 ರೀತಿ ಇದೆ. ಹಳೇ ಕರ್ನಾಟಕದ ಬ್ರಾಹ್ಮಣರು ಸರ್ವೇಜನೋ ಸುಖಿನೋ ಭವಂತು ಎಂದು ಹೇಳುತ್ತಾರೆ. ಆದರೆ ಇವರು ಹಾಗೆ ಹೇಳುವುದಿಲ್ಲ. ಪ್ರಹ್ಲಾದ್ ಜೋಶಿ ಮಹಾರಾಷ್ಟ್ರದ ಭಾಗದ ಪೇಶ್ವೆಗಳ ವಂಶಸ್ಥರಿಗೆ ಸೇರಿದವರು. ಶೃಂಗೇರಿ ಮಠವನ್ನು ಒಡೆದಿರುವ ಗುಂಪಿಗೆ ಸೇರಿದವರು. ಇವರು ಶಂಕರಾಚಾರ್ಯರನ್ನು ಹೊಡೆದು ಓಡಿಸಿದವರು. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕೊಂದಿರುವವರ ವರ್ಗಕ್ಕೆ ಸೇರಿದವರು ಎಂದು ಆರೋಪಿಸಿದ್ದಾರೆ.


Spread the love

By admin