Spread the love

ಅಂಕಾರಾ: ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಕೃತಿ ತಾಂಡವವಾಡಿದೆ. ಇಂದು ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಉಭಯ ರಾಷ್ಟ್ರಗಳು ತತ್ತರಿಸಿ ಹೋಗಿವೆ.

7.8 ತೀವ್ರತೆಯ ಭೂಕಂಪನದಲ್ಲಿ 640 ಕ್ಕೂ ಅಧಿಕ ಜನರು ಈವರೆಗೂ ಸಾವನ್ನಪ್ಪಿದ್ದಾರೆ. ಟರ್ಕಿಯೊಂದರಲ್ಲೇ 284 ಜನರು ಸಾವನ್ನಪ್ಪಿದ್ದಾರೆ. ಸಿರಿಯಾದಲ್ಲೂ ಇಷ್ಟೇ ಪ್ರಮಾಣದ ಜನರು ಅಸುನೀಗಿದ್ದಾರೆ.ಪ್ರಕೃತಿಯ ಮುನಿಸಿನಿಂದಾಗಿ 2300 ಕ್ಕೂ ಹೆಚ್ಚು ಜನರು ಗಾಯಗೊಂಡರೆ, 1700 ಕ್ಕೂ ಅಧಿಕ ಕಟ್ಟಡಗಳು ನೆಲಕ್ಕುರುಳಿ ಬಿದ್ದಿವೆ. ಭೂಕಂಪದಿಂದ ಎರಡು ರಾಷ್ಟ್ರಗಳ 10 ಪ್ರಾಂತ್ಯಗಳು ತೀವ್ರ ಬಾಧಿತವಾಗಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜನರು ಅವಶೇಷಗಳಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Spread the love

By admin